ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಬಂದ ರಷ್ಯಾದ ಎಸ್‌–400 ಕ್ಷಿಪಣಿ ಹೊಸ ಬ್ಯಾಚ್‌

Last Updated 16 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ನವದೆಹಲಿ:ಉಕ್ರೇನ್‌ನಲ್ಲಿ ನಡೆಯುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯ ಹೊರತಾಗಿಯೂ ರಷ್ಯಾ ತನ್ನ ಪ್ರಬಲ ಅಸ್ತ್ರ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಹೊಸ ಬ್ಯಾಚ್ ಅನ್ನು ಯಾವುದೇ ವಿಳಂಬವಿಲ್ಲದೆ ಭಾರತಕ್ಕೆ ಪೂರೈಸಿದೆ.

ಕೇಂದ್ರದ ಉನ್ನತ ಅಧಿಕಾರಿಗಳು ನೀಡಿರುವ ಮಾಹಿತಿ ಉಲ್ಲೇಖಿಸಿ ‘ಇಂಡಿಯಾ ಟುಡೆ’ ಶುಕ್ರವಾರ ಈ ಬಗ್ಗೆ ವರದಿ ಮಾಡಿರುವುದಾಗಿ ರಷ್ಯಾದ ಸರ್ಕಾರಿ ನಿಯಂತ್ರಣದ ಸುದ್ದಿ ಸಂಸ್ಥೆ ‘ಟಾಸ್‌’ ಹೇಳಿದೆ.

‘ಎಸ್‌-400 ಕ್ಷಿಪಣಿಗಳ ವ್ಯವಸ್ಥೆಯ ಹೊಸ ಬ್ಯಾಚ್‌ ಹಡಗಿನ ಮೂಲಕ ಭಾರತಕ್ಕೆ ಬಂದು ತಲುಪಿದೆ. ಕ್ಷಿಪಣಿ ವ್ಯವಸ್ಥೆಯ ಬಿಡಿ ಭಾಗಗಳನ್ನು ವಾಯು ಮತ್ತು ಸಮುದ್ರ ಮಾರ್ಗಗಳ ಮೂಲಕ ರಷ್ಯಾ ಕಳುಹಿಸಿತು. ಅವುಗಳನ್ನು ಗೊತ್ತುಪಡಿಸಿದ ಸ್ಥಳಗಳಲ್ಲಿ ತ್ವರಿತವಾಗಿ ನಿಯೋಜಿಸಿದ್ದು,ಈಗ ಅವು ಕಾರ್ಯನಿರತವಾಗಿವೆ. ಉಕ್ರೇನ್‌ ಬೆಳವಣಿಗೆಯ ಹೊರತಾಗಿಯೂ ಭಾರತ ಯಾವುದೇ ಸಮಸ್ಯೆ ಮತ್ತು ವಿಳಂಬವಿಲ್ಲದೆಎಸ್‌–400 ಕ್ಷಿಪಣಿ ವ್ಯವಸ್ಥೆಯ ಹೊಸ ಬ್ಯಾಚ್‌ ಅನ್ನು ಸ್ವೀಕರಿಸಿದೆ’ ಎಂದುವರದಿ ಹೇಳಿದೆ.

ಭಾರತ2015ರಲ್ಲಿ ರಷ್ಯಾದಿಂದ ಎಸ್‌–400 ಕ್ಷಿಪಣಿವಾಯು ರಕ್ಷಣಾ ವ್ಯವಸ್ಥೆ ಖರೀದಿಸುವುದಾಗಿ ಪ್ರಕಟಿಸಿತ್ತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು 2018ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ವೇಳೆ, ಐದು ಎಸ್‌–400 ರೆಜಿಮೆಂಟ್‌ ಕಿಟ್‌ಗಳನ್ನು ಭಾರತಕ್ಕೆ ಪೂರೈಸುವ 5.43 ಶತಕೋಟಿ ಡಾಲರ್‌ (ಅಂದಾಜು ₹37 ಸಾವಿರ ಕೋಟಿ) ಮೊತ್ತದ ಯೋಜನೆಯ ಒಪ್ಪಂದ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT