ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯಾನಂದನ ಜತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ದು ಮಾಡಿದ ಅಮೆರಿಕದ ನೆವಾರ್ಕ್

Last Updated 4 ಮಾರ್ಚ್ 2023, 15:45 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ); ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್‌ಕೆ) ಜೊತೆ ಮಾಡಿಕೊಂಡಿದ್ದ ‘ಸಿಸ್ಟರ್‌ ಸಿಟಿ ಒಪ್ಪಂದ’ವನ್ನು ಅಮೆರಿಕದ ನೆವಾರ್ಕ್ ನಗರ ರದ್ದುಗೊಳಿಸಿದೆ.

‘ಕೈಲಾಸ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನು ಗಮನಿಸಲಾಯಿತು. ಈ ಹಿಂದೆ ವಂಚನೆ ಇರುವುದು ಖಚಿತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ನೆವಾರ್ಕ್ ನಗರದ ಸಂವಹನ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯ ಪ್ರಶ್ನೆಗೆ ಇ–ಮೇಲ್‌ ಮೂಲಕ ಉತ್ತರಿಸಿರುವ ಅವರು, ಒಪ್ಪಂದ ಮಾಡಿಕೊಂಡಿರುವ ಕುರಿತು ವಿಷಾದವಿದೆ ಎಂದಿದ್ದಾರೆ.

ನೆವಾರ್ಕ್‌ನ ಸಿಟಿ ಹಾಲ್‌ನಲ್ಲಿ ಜ.12ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಜ.18ರಂದು ಈ ಒಪ್ಪಂದವನ್ನು ರದ್ದುಪಡಿಸಲಾಗಿದೆ.

ಒಂದು ದೇಶದ ನಗರ ಆಡಳಿತವು ಮತ್ತೊಂದು ದೇಶದ ನಗರದೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಗೆ ‘ಸಿಸ್ಟರ್‌ ಸಿಟಿ ಒಪ್ಪಂದ’ ಎನ್ನಲಾಗುತ್ತದೆ. ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧಗಳ ವೃದ್ಧಿ ಈ ಒಪ್ಪಂದದ ಉದ್ದೇಶವಾಗಿರುತ್ತದೆ.

‘2019 ರಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ) ಸ್ಥಾಪಿಸಲಾಗಿದೆ. 200 ಕೋಟಿ ಹಿಂದೂಗಳು ಇಲ್ಲಿ ವಾಸಿಸುತ್ತಿದ್ದಾರೆ’ ಎಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಂಡಿದ್ದು, ಯುಎಸ್‌ಕೆ ವೆಬ್‌ಸೈಟ್‌ನಲ್ಲಿ ಈ ಕುರಿತು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT