ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಜಿಒಗಳಿಗೆ ₹50,000 ಕೋಟಿ ವಿದೇಶಿ ದೇಣಿಗೆ

2016–17ರಿಂದ 2019–20 ರ ಅವಧಿಯ ಅಂಕಿ–ಅಂಶ ಬಿಡುಗಡೆ
Last Updated 29 ಮಾರ್ಚ್ 2021, 12:26 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎನ್‌ಜಿಒಗಳಿಗೆ 2016–17 ರಿಂದ 2019–20 ಅವಧಿಯಲ್ಲಿ ₹ 50,000 ಕೋಟಿಗೂ ಅಧಿಕ ವಿದೇಶಿ ದೇಣಿಗೆ ಹರಿದು ಬಂದಿದೆ. ಅದರಲ್ಲೂ, ಕರ್ನಾಟಕ, ದೆಹಲಿ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿರುವ ಎನ್‌ಜಿಒಗಳಿಗೆ ಹೆಚ್ಚು ದೇಣಿಗೆ ಸಂದಾಯವಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತವೆ.

130 ದೇಶಗಳ ದಾನಿಗಳು ದೇಣಿಗೆ ನೀಡಿದ್ದು, ಈ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ ವಿವಿಧ ಎನ್‌ಜಿಒಗಳಿಗೆ ಅಮೆರಿಕ ₹ 19,942.22 ಕೋಟಿ ದೇಣಿಗೆ ನೀಡಿದೆ. ಇದು ಈ ಅವಧಿಯಲ್ಲಿ ಹರಿದು ಬಂದ ಒಟ್ಟು ದೇಣಿಗೆ ಶೇ 39.11ರಷ್ಟಾಗುವುದು.

ಈ ಅವಧಿಯಲ್ಲಿ ದೆಹಲಿಯಲ್ಲಿನ ಎನ್‌ಜಿಒಗಳಿಗೆ ಗರಿಷ್ಠ ದೇಣಿಗೆ ₹ 12,861.64 ಕೋಟಿ ಹರಿದು ಬಂದಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (₹ 6,395.26 ಕೋಟಿ), ಮಹಾರಾಷ್ಟ್ರ (₹ 5,367 ಕೋಟಿ) ಹಾಗೂ ಕರ್ನಾಟಕದ (₹5,246.72 ಕೋಟಿ) ಎನ್‌ಜಿಒಗಳಿವೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿ ನೋಂದಾಯಿಸಿಕೊಂಡಿರುವ ಎನ್‌ಜಿಒಗಳು, ಸ್ವಯಂ ಸೇವಾ ಸಂಸ್ಥೆಗಳು ವಿದೇಶಿಗಳಿಂದ ದೇಣಿಗೆ ಪಡೆಯಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT