ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಕ್ಕೆ ಹಾನಿ: ಬಿಪಿಸಿಎಲ್‌‌ ಸೇರಿ ನಾಲ್ಕು ಕಂಪನಿಗೆ ₹286 ಕೋಟಿ ದಂಡ

Last Updated 14 ಆಗಸ್ಟ್ 2020, 11:31 IST
ಅಕ್ಷರ ಗಾತ್ರ

ನವದೆಹಲಿ: ಪರಿಸರಕ್ಕೆ ಹಾನಿಯುಂಟು ಮಾಡಿದ ಕಾರಣಕ್ಕೆ ಬಿಪಿಸಿಎಲ್, ಎಚ್‌ಪಿಸಿಎಲ್‌ ಸೇರಿದಂತೆ ನಾಲ್ಕು ಕಂಪನಿಗಳಿಗೆ ₹286.2 ಕೋಟಿ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿದೆ.

ಮುಂಬೈನ ಮಹುಲ್, ಅಂಬಾಪಾಡಾ, ಚೆಂಬೂರು ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ವಿಪರೀತ ಹಾನಿಗೊಳಗಾಗಿದ್ದು, ’ಗ್ಯಾಸ್‌ ಚೇಂಬರ್’ನಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎನ್‌ಜಿಟಿ ಅಸಮಾಧಾನ ವ್ಯಕ್ತಪಡಿಸಿದೆ.

ಸೀ ಲಾರ್ಡ್ ಕಂಟೇನರ್ಸ್ ಲಿಮಿಟೆಡ್, ಏಜಿಸ್ ಲಾಗಿಸ್ಟಿಕ್ ಲಿಮಿಟೆಡ್ ಇತರೆ ಎರಡು ಕಂಪನಿಗಳು. ಪರಿಸರದ ಹಾನಿಯಿಂದ ಮನುಷ್ಯನ ಶ್ವಾಸಕೋಶ ಮತ್ತು ಇತರೆ ಅಂಗಾಂಗಗಳಿಗೆ ಹಾನಿ ಆಗಲಿದೆ. ಇದಕ್ಕೆ ಪರಿಸರ ಮಾಲಿನ್ಯವೇ ಕಾರಣ ಎಂದು ನ್ಯಾಯಮಂಡಳಿಯು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT