ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಗುಣಮಟ್ಟ ಅಳೆಯುವ 175 ಕೇಂದ್ರ ಸ್ಥಾಪಿಸಲು ಎನ್‌ಜಿಟಿ ಸೂಚನೆ

ಆರು ತಿಂಗಳ ಅವಧಿ ನೀಡಿದ ಹಸಿರು ನ್ಯಾಯಪೀಠ
Last Updated 25 ಆಗಸ್ಟ್ 2020, 11:18 IST
ಅಕ್ಷರ ಗಾತ್ರ

ನವದೆಹಲಿ: ಇನ್ನು ಆರು ತಿಂಗಳೊಳಗೆ ದೇಶದಾದ್ಯಂತ ಗಾಳಿಯ ಗುಣಮಟ್ಟ ಅಳೆಯುವ 175 ಕೇಂದ್ರಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹಸಿರು ಪೀಠ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ನಿರ್ದೇಶನ ನೀಡಿದೆ.

ದೇಶದ ವಿವಿಧ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಯ(ಎಸ್‌ಪಿಸಿಬಿ) ಅಧ್ಯಕ್ಷರು / ಸದಸ್ಯ ಕಾರ್ಯದರ್ಶಿಗಳೊಂದಿಗೆ ಮಂಗಳವಾರ ನಡೆದ ಆನ್‌ಲೈನ್ ಸಭೆಯಲ್ಲಿ ಹಸಿರುಪೀಠ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ನಿರ್ದೇಶನ ನೀಡಿದೆ. ಹಾಗೆಯೇ, ಈ ಕೆಲಸದ ಮೇಲ್ವಿಚಾರಣೆಯನ್ನೂ ಮಾಡುವಂತೆ ಸೂಚಿಸಿದೆ.

ಗಾಳಿ ಗುಣಮಟ್ಟ ಅಳೆಯುವ ಕೇಂದ್ರಗಳ ಅಳವಡಿಕೆ ಕಾರ್ಯಇನ್ನೊಂದು ತಿಂಗಳಲ್ಲಿ ಆರಂಭವಾಗಬಹುದು. ಈ ಕೇಂದ್ರಗಳ ನಿರ್ಮಾಣಕ್ಕಾಗಿ ‘ಪರಿಸರ ಪರಿಹಾರ ನಿಧಿ’ಯಲ್ಲಿನ ಮೊತ್ತವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಬಳಸಬಹುದು ಎಂದು ಪೀಠ ಹೇಳಿದೆ.

175 ಕೇಂದ್ರಗಳಲ್ಲಿ 25 ಸ್ಟೇಷನ್‌ಗಳನ್ನು ಸಿಪಿಸಿಬಿ, ಎಸ್‌ಪಿಸಿಬಿ, ಪಿಸಿಸಿ ಜಂಟಿಯಾಗಿ ನಿರ್ಮಾಣ ಮಾಡಬೇಕು. ಇದಕ್ಕಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಪರಿಸರ ಪರಿಹಾರ ನಿಧಿಯಿಂದ ಹಣಕಾಸು ಒದಗಿಸಬೇಕು. ಉತ್ತಮ ಬೆಲೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ಕಾರ್ಯವಿಧಾನವನ್ನು ಅನುಸರಿಬೇಕು’ ಎಂದು ನ್ಯಾಯಮೂರ್ತಿ ಎ.ಕೆ.ಗೋಯೆಲ್‌ ನೇತೃತ್ವದ ಹಸಿರು ನ್ಯಾಯಪೀಠ ತಿಳಿಸಿದೆ.

ದೇಶದಲ್ಲಿ ಈಗಾಗಲೇ 173 ಗಾಳಿ ಗುಣಮಟ್ಟ ಅಳೆಯುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಿಪಿಸಿಬಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಮಂಡಳಿ ಈ ಆದೇಶವನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT