ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಉಗ್ರ ಕಮಾಂಡರ್‌ಗಳ ಸುಳಿವಿಗೆ ₹ 10 ಲಕ್ಷ ಇನಾಮು: ಎನ್‌ಐಎ

Last Updated 30 ಮಾರ್ಚ್ 2022, 14:36 IST
ಅಕ್ಷರ ಗಾತ್ರ

ಶ್ರೀನಗರ: ನಿಷೇಧಿತ ಲಷ್ಕರ್‌–ಎ–ತೈಬಾ (ಎಲ್‌ಇಟಿ) ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ದಿ ರಿಸಿಸ್ಟೆನ್ಸ್ ಫ್ರಂಟ್‌ನ (ಟಿಆರ್‌ಎಫ್‌) ನಾಲ್ವರು ಕಮಾಂಡರ್‌ಗಳ ಸುಳಿವು ಪತ್ತೆ ಹಚ್ಚಿಕೊಟ್ಟವರಿಗೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ₹ 10 ಲಕ್ಷ ರೂ ಇನಾಮು ಘೋಷಿಸಿದೆ.

‘ಪರಾರಿಯಾಗಿರುವ ಎಲ್‌ಇಟಿ ಕಮಾಂಡರ್‌ಗಳಾದ ಸಜ್ಜದ್ ಗುಲ್, ಸಲೀಂ ರೆಹಮಾನಿ ಮತ್ತು ಸೈಫುಲ್ಲಾ ಸಾಜಿದ್ ಜುಟ್, ನವಾಬ್‌ ಶಾ ಅವರ ಸುಳಿವು ಕೊಟ್ಟವರಿಗೆ ₹ 10 ಲಕ್ಷ ಬಹುಮಾನ ಘೋಷಿಸಲಾಗಿದೆ’ ಎಂದು ಎನ್ಐಎ ವಕ್ತಾರರು ತಿಳಿಸಿದರು.

ಟಿಆರ್‌ಎಫ್‌ನ ಈ ನಾಲ್ವರು ಕಮಾಂಡರ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಐಎ, ಈ ನಾಲ್ವರು ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಕೃತ್ಯ ನಡೆಸುವ ಸಲುವಾಗಿ ಯುವಕರನ್ನು ಉಗ್ರ ಸಂಘಟನೆ ಸೇರಲು ಪ್ರೇರೇಪಿಸಿ ಭಯೋತ್ಪಾದಕ ಪಡೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿದೆ. ಈ ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT