ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: 2009ರ ಹತ್ಯೆ ಪ್ರಕರಣ; ಟಿಎಂಸಿ ನಾಯಕ ಛತ್ರಧರ್‌ ಮಹತೊ ಬಂಧನ

Last Updated 28 ಮಾರ್ಚ್ 2021, 5:36 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ 2009ರಲ್ಲಿ ನಡೆದ ಸಿಪಿಎಂ ನಾಯಕರೊಬ್ಬರ ಹತ್ಯೆಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಛತ್ರಧರ್ ಮಹತೊ ಅವರನ್ನು ಬಂಧಿಸಿದೆ.

ಶನಿವಾರ ರಾಜ್ಯದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆದಿತ್ತು. ಮಹತೊ ಅವರು ತಮ್ಮ ಮತ ಚಲಾಯಿಸಿದ ಬಳಿಕ ಝಾರ್‌ಗ್ರಾಮ್‌ ಜಿಲ್ಲೆಯ ಅವರ ನಿವಾಸದಿಂದ ಅವರನ್ನು ಬಂಧಿಸಲಾಯಿತು. ಭಾನುವಾರ ಅವರನ್ನು ಇಲ್ಲಿನ ನ್ಯಾಯಾಲಯವೊಂದರ ಮುಂದೆ ಹಾಜರಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಹತೊ ಅವರು ಮಾವೋವಾದಿ ಬೆಂಬಲಿತ ಪೀಪಲ್‌ ಅಗೈನ್‌ಸ್ಟ್‌ ಪೊಲೀಸ್ ಅಟ್ರಾಸಿಟೀಸ್‌ (ಪಿಸಿಪಿಎ) ಸಂಘಟನೆಯ ಸಂಚಾಲಕರಾಗಿದ್ದರು. 2009ರಲ್ಲಿ ಸಿಪಿಎಂ ನಾಯಕ ಪ್ರಬೀರ್ ಮಹತೊ ಅವರ ಹತ್ಯೆಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT