ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ ಪ್ರಕರಣ: ಶಂಕಿತರ ವಿಡಿಯೊ ಬಿಡುಗಡೆ, ಸುಳಿವು ಕೊಟ್ಟವರಿಗೆ ₹ 10 ಲಕ್ಷ

ಅಕ್ಷರ ಗಾತ್ರ

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿಯ ಬಳಿ ಇದೇ ವರ್ಷ ಜನವರಿಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳ ದೃಶ್ಯಗಳನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಮಂಗಳವಾರ ಬಿಡುಗಡೆ ಮಾಡಿದೆ.

ದೃಶ್ಯದಲ್ಲಿರುವ ಶಂಕಿತ ವ್ಯಕ್ತಿಗಳ ಕುರಿತು ಸುಳಿವು ನೀಡುವವರಿಗೆ ₹ 10 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಪ್ರಕಟಿಸಿದೆ. ನವದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿಯ ಬಳಿ ಸ್ಫೋಟ ಸಂಭವಿಸಿದ ದಿನ ಇಬ್ಬರು ವ್ಯಕ್ತಿಗಳು ಅದೇ ಸ್ಥಳದಲ್ಲಿ ಸುತ್ತಾಡಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಪೊಲೀಸರ ಪ್ರಕಾರ, 5 , ಜಿಂದಾಲ್‌ ಹೌಸ್‌ ಸಮೀಪ ಎಪಿಜೆ ಅಬ್ದುಲ್‌ ಕಲಾಂ ರಸ್ತೆಯಲ್ಲಿ ಆ ದಿನ ಸಂಜೆ (2021ರ ಜನವರಿ 29) ಕಡಿಮೆ ತೀವ್ರತೆಯ ಸುಧಾರಿತ ಸಾಧನ ಸ್ಫೋಟಗೊಂಡಿತ್ತು. ಸ್ಫೋಟ ಸ್ಥಳದ ಸಮೀಪದಲ್ಲಿದ್ದ ಮೂರು ಕಾರುಗಳ ಕಿಟಕಿಗಳ ಗಾಜುಗಳಿಗೆ ಹಾನಿಯಾಗಿತ್ತು, ಅದನ್ನು ಹೊರತು ಪಡಿಸಿದರೆ ಕಟ್ಟಡಗಳಿಗೆ ಹಾನಿಯಾಗಿರಲ್ಲಿಲ್ಲ ಹಾಗೂ ಯಾವುದೇ ವ್ಯಕ್ತಿಗೆ ತೊಂದರೆಯಾಗಿರಲಿಲ್ಲ.

ಭಾರತ ಮತ್ತು ಇಸ್ರೇಲ್‌ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾದ ವಾರ್ಷಿಕೋತ್ಸವದ ದಿನವೇ ಸ್ಫೋಟ ಸಂಭವಿಸಿತ್ತು. 1992ರ ಜನವರಿ 29ರಿಂದ ಭಾರತ–ಇಸ್ರೇಲ್‌ ನಡುವೆ ರಾಜತಾಂತ್ರಿಕ ಬಾಂಧವ್ಯ ವೃದ್ಧಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT