ಮಾವೋವಾದಿಗಳೊಂದಿಗೆ ಸಂಪರ್ಕ ಆರೋಪ: ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಎನ್ಐಎ ದಾಳಿ

ಹೈದರಾಬಾದ್: ನಿಷೇಧಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ದಾಳಿ ನಡೆಸಿದೆ.
31 ತಾಣಗಳಲ್ಲಿ ಎನ್ಐಎ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ. ಈ ಪೈಕಿ ನಿಷೇಧಿತ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದವರು ಮತ್ತು ವಿವಿಧ ರೀತಿಯ ಸಹಕಾರ ನೀಡುತ್ತಿದ್ದವರು ಇದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ದಾಳಿಯ ಸಂದರ್ಭ ಒಟ್ಟು 40 ಮೊಬೈಲ್ ಪೋನ್ಗಳು, 44 ಸಿಮ್ ಕಾರ್ಡ್, 70 ಹಾರ್ಡ್ ಡಿಸ್ಕ್, ಮೈಕ್ರೋ ಎಸ್ಡಿ ಕಾರ್ಡ್, ಫ್ಲ್ಯಾಶ್ಕಾರ್ಡ್, 184 ಸಿಡಿ/ಡಿವಿಡಿ, 19 ಪೆನ್ಡ್ರೈವ್, ಟ್ಯಾಬ್, ಆಡಿಯೋ ರೆಕಾರ್ಡರ್ ಮತ್ತು ₹10 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ.
ಜತೆಗೆ ಮಾವೋವಾದಿ ಸಂಘಟನೆಗಳಿಗೆ ಸಂಬಂಧಿಸಿದ ಆಯುಧಗಳು, ಸಲಕರಣೆಗಳು, ವಿವಿಧ ದಾಖಲೆ, ಕೈಬರಹದ ಪತ್ರ, ಸಿಪಿಐ ಮಾವೋವಾದಿ ಪಕ್ಷದ ಸಾಹಿತ್ಯ ಸಹಿತ ವಿವಿಧ ಸರಕುಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಎನ್ಐಎ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.