ಬುಧವಾರ, ಅಕ್ಟೋಬರ್ 21, 2020
21 °C

ಬಹುಕೋಟಿ ವಂಚನೆ ಪ್ರಕರಣ:ಪಿಎನ್‌ಬಿ ನಿವೃತ್ತ ಅಧಿಕಾರಿ ವಿರುದ್ಧ ಸಿಬಿಐ ಆರೋಪ ಪಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್‌ನಾಥ್ ಶೆಟ್ಟಿ ವಿರುದ್ಧ ಸಿಬಿಐ ಹೊಸದಾಗಿ ಆರೋಪ ಪಟ್ಟಿ ಸಲ್ಲಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ್‌ನಾಥ್ ಶೆಟ್ಟಿ ಮತ್ತು ಪತ್ನಿ ಆಶಾಲತಾ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಶಾ ಲತಾ, ಇಂಡಿಯನ್‌ ಬ್ಯಾಂಕ್‌ನಲ್ಲಿ ಗುಮಾಸ್ತೆಯಾಗಿದ್ದು, ಈ ಬ್ಯಾಂಕ್ ವಂಚನೆ ಪ್ರಕಣ ನಡೆದ 2011–17ರ ಅವಧಿಯಲ್ಲಿ ಅಕ್ರಮವಾಗಿ ₹4.28 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದನೆ ಮಾಡಿದ್ದರು.

ಒಟ್ಟು ಆಸ್ತಿಯಲ್ಲಿ ₹ 2.63 ಕೋಟಿಗೆ ಮೌಲ್ಯದ ಆಸ್ತಿಗೆ ತೃಪ್ತಿದಾಯಕ ವಿವರಣೆ ನೀಡಲಿಲ್ಲ ಎಂದು  ಸಿಬಿಐ ಆರೋಪಿಸಿದೆ. ಇದು ಅವರು ನೀಡಿರುವ ಆದಾಯದ ಮೂಲಗಳಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಶೆಟ್ಟಿ ಮತ್ತು ಮೋದಿ, ಚೋಕ್ಸಿ ನಡುವಿನ ಸಂಬಂಧದ ಬಗ್ಗೆಯೂ ಸಿಬಿಐ ಗಮನ ಹರಿಸಿದ್ದು, ಈ ಅವಧಿಯಲ್ಲಿ ಉಪ ವ್ಯವಸ್ಥಾಪಕರು ಎಷ್ಟು ಆಸ್ತಿ ಸಂಗ್ರಹಿಸಿದ್ದಾರೆಂದು ಗಮನಿಸಲಾಗಿದೆ ಎಂದು ಸಿಬಿಐ ಹೇಳಿದೆ.

ಶೆಟ್ಟಿ ಮತ್ತು ಅವರ ಪತ್ನಿ ಆಸ್ತಿಯನ್ನು ಪರಿಶೀಲಿಸಲು ಸಿಬಿಐ ಸಂಸ್ಥೆ 2018ರ ನವೆಂಬರ್‌ನಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು