ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಾಹನಗಳಿನ್ನು ಎಲೆಕ್ಟ್ರಿಕಲ್‌ ವಾಹನಗಳಾಗಿ ಪರಿವರ್ತನೆ: ಗಡ್ಕರಿ ಸಂಕಲ್ಪ

Last Updated 19 ಫೆಬ್ರುವರಿ 2021, 18:54 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಲ್ಲ ವಾಹನಗಳನ್ನು ಎಲೆಕ್ಟ್ರಿಕಲ್‌ ವಾಹನಗಳನ್ನಾಗಿ ಪರಿವರ್ತಿಸುವ ಸಂಕಲ್ಪ ಮಾಡಿರುವ ಸಚಿವ ನಿತಿನ್‌ ಗಡ್ಕರಿ, ದೇಶದ ತೈಲ ಆಮದು ಅವಲಂಬನೆ ಕಡಿಮೆ ಮಾಡಲು ಎಲ್ಲ ಇಲಾಖೆಗಳು ಇದನ್ನೇ ಪಾಲಿಸಬೇಕು ಎಂದು ಶುಕ್ರವಾರ ಹೇಳಿದ್ದಾರೆ.

‘ಗೋ ಎಲೆಕ್ಟ್ರಿಕ್’ (ವಿದ್ಯುತ್‌ ಚಾಲಿತ ವಾಹನಗಳಿಗೆ ಬದಲಾಗಿ) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ವಿದ್ಯುತ್‌ಚಾಲಿತ ವಾಹನಗಳನ್ನು ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಒಂದು ಎಲೆಕ್ಟ್ರಿಕ್ ವಾಹನದಿಂದ ತಿಂಗಳಿಗೆ ಸುಮಾರು ₹30 ಸಾವಿರ ಉಳಿತಾಯ ಮಾಡಬಹುದು. ದೆಹಲಿಯಲ್ಲಿ ಒಂದು ತಿಂಗಳಲ್ಲಿ 10 ಸಾವಿರ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಿದರೆ ಸುಮಾರು ₹30 ಕೋಟಿ ಹಣ ಉಳಿಸಬಹುದು ಎಂದು ಸಚಿವರು ತಿಳಿಸಿದರು.

‘ಅಡುಗೆ ಅನಿಲಕ್ಕೆ ಈಗಾಗಲೇ ಸಬ್ಸಿಡಿ ನೀಡುತ್ತಿದ್ದೇವೆ. ವಿದ್ಯುತ್ ಅಡುಗೆ ಉಪಕರಣಗಳಿಗೆ ಏಕೆ ಸಬ್ಸಿಡಿ ನೀಡಬಾರದು’ ಎಂದು ಪ್ರಶ್ನಿಸಿದ ಸಚಿವರು, ‘ವಿದ್ಯುತ್‌ ಉಪಕರಣದಿಂದ ಅಡುಗೆ ಮಾಡುವುದು ಶುಚಿಯಾಗಿಯೂ ಇರುತ್ತದೆ, ಅಲ್ಲದೇ ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಅಡುಗೆಗಾಗಿ ದುಬಾರಿ ಆಮದು ಅನಿಲ ಖರೀದಿ ಬೆಂಬಲಿಸುವ ಬದಲು, ವಿದ್ಯುತ್ ಅಡುಗೆ ಉಪಕರಣಗಳ ಖರೀದಿಗೆ ಸಬ್ಸಿಡಿ ನೀಡಬೇಕು’ ಎಂದರು.

ಇಂಧನ ಸಚಿವ ಆರ್‌.ಕೆ. ಸಿಂಗ್‌ಅವರಿಗೂ ತಮ್ಮ ಇಲಾಖೆಯಲ್ಲಿ ಅಧಿಕಾರಿಗಳು ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವುದನ್ನು ಕಡ್ಡಾಯಗೊಳಿಸುವಂತೆ ಗಡ್ಕರಿ ಒತ್ತಾಯಿಸಿದರು.

ಸಚಿವ ಸಿಂಗ್‌ ಅವರು, ವಿದ್ಯುತ್‌ ಚಾಲಿತ ಬಸ್ ಸೇವೆಯನ್ನು ದೆಹಲಿ– ಆಗ್ರಾ ಮತ್ತು ದೆಹಲಿ– ಜೈಪುರ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT