ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಭಾರತದ ರಾಷ್ಟ್ರಪಿತ ಈ ದೇಶಕ್ಕೆ ಏನು ಮಾಡಿದ್ದಾರೆ: ನಿತೀಶ್‌ ಕುಮಾರ್‌

Last Updated 1 ಜನವರಿ 2023, 11:26 IST
ಅಕ್ಷರ ಗಾತ್ರ

ಪಟ್ನಾ: ನವ ಭಾರತದ ರಾಷ್ಟ್ರಪಿತ ಈ ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

ಇಲ್ಲಿನ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್‌ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು.

ಕಳೆದ ಡಿಸೆಂಬರ್‌ನಲ್ಲಿ ಅಮೃತಾ ಫಡಣವೀಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಭಾರತದ ಅಧುನಿಕ ರಾಷ್ಟ್ರಪಿತ ಎಂದು ಕರೆದಿದ್ದರು. ‘ಭಾರತ ಇಬ್ಬರು ರಾಷ್ಟ್ರಪಿತರನ್ನು ಹೊಂದಿದೆ ಎಂಬುದು ನನ್ನ ದೃಢವಾದ ಅಭಿಪ್ರಾಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನವ ಭಾರತದ ರಾಷ್ಟ್ರಪಿತ ಹಾಗೂ ಮಹಾತ್ಮ ಗಾಂಧಿ ಹಿಂದಿನ ಭಾರತದ ರಾಷ್ಟ್ರಪಿತ‘ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿರುವ ನಿತೀಶ್ ಕುಮಾರ್, ‘ಸ್ವಾತಂತ್ರ್ಯ ಹೋರಾಟಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ಆದರೂ ನಾವು ಇತ್ತೀಚೆಗೆ ನವ ಭಾರತದ ರಾಷ್ಟ್ರಪಿತ ಎಂಬ ಹೇಳಿಕೆಯನ್ನು ಎಲ್ಲಕಡೇ ಕೇಳುತ್ತಿದ್ದೇವೆ. ಹಾಗಾದರೆ ಭಾರತದ ನವ ರಾಷ್ಟ್ರಪಿತ ಈ ದೇಶಕ್ಕಾಗಿ ಏನು ಮಾಡಿದ್ದಾರೆ?‘ ಎಂದು ಪ್ರಶ್ನೆ ಮಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಆರ್‌ಎಸ್‌ಎಸ್‌ ಯಾವ ಕೊಡುಗಡೆಯನ್ನು ನೀಡಿಲ್ಲ ಎಂದರು. ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದವರು ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ ಕೊಡುಗೆ ಏನೂ ಇಲ್ಲ ಎಂಬುದು ಇತಿಹಾಸ ನೋಡಿದರು ತಿಳಿಯುತ್ತದೆ ಎಂದರು.

‘ಈ ದೇಶಕ್ಕೆ ಮಹಾತ್ಮ ಗಾಂಧೀಜಿ ನೀಡಿರುವ ಕೊಡುಗೆಯನ್ನು ನಾವು ಮರೆಯಬಾರದು. ಆದರೆ ಮೋದಿಯವರೇ ಈಗ ನೀವು ʼನವ ಭಾರತದ ರಾಷ್ಟ್ರಪಿತʼ ಎಂದು ಕರೆಸಿಕೊಳ್ಳುತ್ತಿರುವಿರಿ ಈ ರಾಷ್ಟ್ರಕ್ಕಾಗಿ ನೀವು ಏನು ಮಾಡಿದ್ದೀರಿ? ನಿಮ್ಮ ಕೊಡುವೆ ಏನು? ಭಾರತ ನಿಜವಾಗಿಯೂ ಪ್ರಗತಿ ಸಾಧಿಸಿದೆಯೇ?‘ ಎಂದು ನಿತೀಶ್‌ ಕುಮಾರ್‌ ಕೇಳಿದ್ದಾರೆ.

ಈ ವಿಷಯವನ್ನು ಇಟ್ಟುಕೊಂಡು ಅವರು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ ವಿಷಯಗಳನ್ನು ಇಟ್ಟುಕೊಂಡು ಅವರು ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT