ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಯಿಂದ ಹೊರಬರಬಹುದು: ಚಿರಾಗ್ ಪಾಸ್ವಾನ್

Last Updated 1 ನವೆಂಬರ್ 2020, 15:18 IST
ಅಕ್ಷರ ಗಾತ್ರ

ಪಟ್ನಾ: ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಮೈತ್ರಿಯಿಂದ ಹೊರಬಂದು ಆರ್‌ಜೆಡಿ ನೇತೃತ್ವದ ಮಹಾಘಟಬಂಧನಕ್ಕೆ ಸೇರಬಹುದು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎಗೆ ಸವಾಲು ಹಾಕುವ ಮತ್ತೊಂದು ಪ್ರಯತ್ನವನ್ನು ಮಾಡಬಹುದು ಎಂದು ಭಾನುವಾರ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಯಿಂದ ಹೊರಬಂದು ಪ್ರತ್ಯೇಕವಾಗಿ ಪಕ್ಷವು ಚುನಾವಣೆ ಎದುರಿಸುತ್ತಿರುವ ಪಾಸ್ವಾನ್, ಎಲ್‌ಜೆಪಿ ಬಿಜೆಪಿಗೆ ನಿಷ್ಠರಾಗಿ ಉಳಿಯುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿರುದ್ಧ ಸಮರ ಸಾರಿದ್ದಾರೆ.

ನಿತೀಶ್ ಕುಮಾರ್ ಅವರು ಪದೇ ಪದೇ ಪಕ್ಷಾಂತರ ಮಾಡುವ ಕ್ರಿಯೆಗಳಿಂದಾಗಿ 'ಪಕ್ಷಾಂತರಿ' ಎಂಬ ಹೆಸರನ್ನು ಗಳಿಸಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರೊಂದಿಗಿನ ಸುದೀರ್ಘ ರಾಜಕೀಯ ಯುದ್ಧದ ನಂತರ ಅವರು ಬಿಹಾರದಲ್ಲಿ ಅಧಿಕಾರಕ್ಕೆ ಬಂದರು ಎಂದಿದ್ದಾರೆ.

ಗುಜರಾತ್ ಗಲಭೆ ಸಂಬಂಧ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದನ್ನು ನೆನಪಿಸಿಕೊಂಡ ಚಿರಾಗ್, ಕೇವಲ ಐದು ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿಯ ವಿರುದ್ಧ ಲಾಲು ಪ್ರಸಾದ್ ಅವರೊಂದಿಗೆ ಇದ್ದರು. ಬಳಿಕ ಲಾಲು ಅವರನ್ನು ಪಕ್ಕಕ್ಕಿಟ್ಟು ಎನ್‌ಡಿಎಗೆ ಮರಳಲು ಅವರಿಗೆ ಕೇವಲ ಎರಡು ವರ್ಷಗಳಷ್ಟೇ ಬೇಕಾಯಿತು ಎಂದು ದೂರಿದ್ದಾರೆ.

ನನ್ನ ಮಾತುಗಳನ್ನು ಗುರುತಿಟ್ಟುಕೊಳ್ಳಿ. ನಿತೀಶ್ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಲಾಲು ಪ್ರಸಾದ್ ವಿರುದ್ಧ ಬಹಳ ತಟಸ್ಥವಾಗಿದ್ದರು. ಆದರೆ ಅವರ ನಿಲುವನ್ನು ಗಮನಿಸಿದರೆ ಅವರು ಮತ್ತೊಮ್ಮೆ ಆಕಡೆಗೆ ಹೊರಳಬಹುದು. ಮುಂದಿನ ಸರ್ಕಾರವನ್ನು ಮಹಾಘಟಬಂಧನದೊಂದಿಗೆ ರಚಿಸಲು ಪ್ರಯತ್ನಿಸಬಹುದು ಮತ್ತು 2024ರಲ್ಲಿ ಮೋದಿಗೆ ಪರ್ಯಾಯವಾಗಿ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ದೂರಿದರು.

243 ಸ್ಥಾನಗಳುಳ್ಳ ವಿಧಾನಸಭೆಯ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎಲ್‌ಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಖ್ಯವಾಗಿ ಆರ್‌ಜೆಡಿ ಸ್ಪರ್ಧಿಸಿರುವ ಕಡೆಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇವುಗಳಲ್ಲಿ ಹೆಚ್ಚಾಗಿ ಕೇಸರಿ ಪಕ್ಷವು ಸ್ಪರ್ಧಿಸುತ್ತಿರುವ 110 ಸ್ಥಾನಗಳಲ್ಲಿ ಪಾಸ್ವಾನ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT