ಶನಿವಾರ, ಡಿಸೆಂಬರ್ 3, 2022
26 °C

ಅಂತರರಾಷ್ಟ್ರೀಯ ಸಮುದಾಯ ಹೆಗಲು ಕೊಡಬೇಕು: ಅಮಿತ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯಾವುದೇ ದೇಶವು ಏಕಾಂಗಿಯಾಗಿ ಭಯೋತ್ಪಾದನೆ ತಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂತರರಾಷ್ಟ್ರೀಯ ಸಮುದಾಯವು ಹೆಗಲಿಗೆ ಹೆಗಲು ಕೊಟ್ಟು ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

‘ಭಯೋತ್ಪಾದನೆಗೆ ಹಣ ಇಲ್ಲ’ (ಎನ್‌ಎಂಎಫ್‌ಟಿ) ಸಮಾವೇಶದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ವಿಷಯದ ಕುರಿತು ಅವರು ಶನಿವಾರ ಮಾತನಾಡಿದರು. ‘ಭಯೋತ್ಪಾದಕರಿಗೆ ಸ್ವರ್ಗ ಎನಿಸಿರುವ ದೇಶಗಳಲ್ಲಿ ಅವರ ಅನಿಯಂತ್ರಿತ ಆರ್ಥಿಕ ಚಟುವಟಿಕೆಗಳಿಗೆ ಕಡಿವಾಣ ಹೇರಬೇಕಿದೆ. ಎಲ್ಲ ದೇಶಗಳು ತಮ್ಮ ಭೌಗೋಳಿಕ–ರಾಜಕೀಯ ಹಿತಾಸಕ್ತಿಗಳನ್ನು ಬದಿಗಿರಿಸಿ, ಈ ಯತ್ನದಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದರು.

*

ಗಡಿ ಮೀರಿದ ಭಯೋತ್ಪಾದನಾ ಬೆದರಿಕೆಯನ್ನು ಮಣಿಸಬೇಕಾದರೆ, ಅಂತರರಾಷ್ಟ್ರೀಯ ಸಮುದಾಯದ ನಡುವೆ ಹಂಚಿಕೆಯಾಗುವ ಗುಪ್ತಚರ ಮಾಹಿತಿಯಲ್ಲಿ ಪಾದರ್ಶಕತೆ ಇರಬೇಕು.
–ಅಮಿತ್ ಶಾ, ಕೇಂದ್ರ ಗೃಹಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು