ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮುಂದಿನ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆಯೇ?

Last Updated 9 ಜೂನ್ 2021, 4:18 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಮುಂದಿನ ಅಲೆಯಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ತುತ್ತಾಗಲಿದ್ದಾರೆ ಎಂಬುದನ್ನು ದೃಢಪಡಿಸುವ ಭಾರತ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಅಂಕಿಅಂಶಗಳಿಲ್ಲ ಎಂದು ಏಮ್ಸ್ ದೆಹಲಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗುಲೇರಿಯಾ, ಕೊರೊನಾವೈರಸ್ ಸಾಂಕ್ರಾಮಿಕ ರೋಗದ 3ನೇ ಅಲೆ ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂಬುದು ತಪ್ಪಾದ ಮಾಹಿತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಮುಂದಿನ ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ಒಳಗಾಗಲಿದ್ದಾರೆ ಎಂಬುದನ್ನು ಬಿಂಬಿಸುವ ಭಾರತ ಅಥವಾ ಜಾಗತಿಕವಾಗಿ ಯಾವುದೇ ಡೇಟಾಗಳಿಲ್ಲ ಎಂದು ಗುಲೇರಿಯಾ ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಶೇಕಡಾ 60ರಿಂದ 70ರಷ್ಟು ಮಕ್ಕಳು, ಅಸ್ವಸ್ಥತೆ, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವಂತ ಮಕ್ಕಳು ಸೌಮ್ಯ ರೋಗಲಕ್ಷಣದೊಂದಿಗೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಉಸಿರಾಟದ ತೊಂದರೆಯ ಸಾಂಕ್ರಾಮಿಕ ರೋಗಗಳಲ್ಲಿ ಅಲೆಗಳು ಸಂಭವಿಸುತ್ತದೆ. 1918ರ ಸ್ಪ್ಯಾನಿಷ್ ಜ್ವರ, ಎಚ್‌1ಎನ್1 ಜ್ವರ ಉದಾಹರಣೆಗಳಾಗಿವೆ. ಜನಸಂಖ್ಯೆ ಜಾಸ್ತಿಯಿದ್ದಾಗ ಅಲೆಗಳು ಸಂಭವಿಸುತ್ತದೆ. ಜನಸಂಖ್ಯೆಯ ಬಹುಪಾಲು ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಪಡೆದಾಗ ಸ್ಥಳೀಯ ರೋಗವಾಗಿ ಪರಿಣಮಿಸುತ್ತದೆ. ಎಚ್1ಎನ್1 ಸಾಮಾನ್ಯವಾಗಿ ಮಾನ್ಸೂನ್ ಅಥವಾ ಚಳಿಗಾಲದಲ್ಲಿ ಹರಡುತ್ತದೆ ಎಂದಿದ್ದಾರೆ.

ವೈರಸ್ ಬದಾವಣೆಯಿಂದ ಅಲೆಗಳು ಸಂಭವಿಸಬಹುದು (ಉದಾಹರಣೆಗೆ ಹೊಸ ರೂಪಾಂತರಗಳು). ಹೊಸ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗುವುದರಿಂದ ವೈರಸ್ ಹರಡಲು ಹೆಚ್ಚಿನ ಅವಕಾಶವಿರುತ್ತದೆ. ಹಾಗಾಗಿ ಕೋವಿಡ್ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:

ಸೋಂಕು ಪ್ರಕರಣಗಳು ಹೆಚ್ಚಾದಾಗ ಭಯ ಉಂಟಾಗಿ ಜನರ ನಡವಳಿಕೆಯು ಬದಲಾಗಿ ಕೋವಿಡ್ ಮಾನದಂಡಗಳನ್ನು ಪಾಲಿಸುತ್ತಾರೆ. ಇದು ಔಷಧಿಯಿಲ್ಲದೆ ರೋಗ ಹರಡುವುದನ್ನು ತಡೆಗಟ್ಟಲು ಸಹಾಯವಾಗುತ್ತದೆ. ಆದರೆ ಅನ್ ಲಾಕ್ ಬಳಿಕ ಸಹಜ ಜೀವನ ಪುನರಾರಂಭವಾದಾಗ ಜನರು ಸೋಂಕು ಹರಡುವುದಿಲ್ಲ ಎಂದು ಭಾವಿಸಿ ಕೋವಿಡ್ ನಿಯಮಾವಳಿ ಪಾಲಿಸುವುದಿಲ್ಲ. ಇದರಿಂದಾಗಿ ಮತ್ತೆ ಸಮುದಾಯದಲ್ಲಿ ಸೋಂಕು ಪ್ರಸರಣವಾಗುತ್ತದೆ. ಇದು ಮತ್ತೊಂದು ತರಂಗಕ್ಕೂ ಕಾರಣವಾಗಬಹುದು ಎಂದು ವಿವರಿಸಿದ್ದಾರೆ.

ಕೋವಿಡ್ ಮುಂದಿನ ಅಲೆಯನ್ನು ನಿಯಂತ್ರಿಸಬೇಕಾದರೆ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸಾಕಷ್ಟು ಜನರು ಲಸಿಕೆ ಹಾಕಿದಾಗ ಮತ್ತು ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಪಡೆದಾಗ ಅಲೆಗಳನ್ನು ತಡೆಗಟ್ಟಬಹುದು. ಹಾಗಾಗಿ ಕೋವಿಡ್ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸುವುದು ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT