ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವ್ಯಾಕ್ಸಿನ್ ಜತೆಗೆ ಪ್ಯಾರಸಿಟಮಾಲ್‌, ನೋವು ನಿವಾರಕ ಶಿಫಾರಸು ಮಾಡಿಲ್ಲ’

Last Updated 6 ಜನವರಿ 2022, 4:16 IST
ಅಕ್ಷರ ಗಾತ್ರ

ಹೈದರಾಬಾದ್‌: ಕೋವ್ಯಾಕ್ಸಿನ್‌ ಪಡೆದವರಿಗೆ ಪ್ಯಾರಸಿಟಮಾಲ್‌ ಆಗಲಿ ನೋವು ನಿವಾರಕಗಳನ್ನಾಗಲಿ ನಾವು ಶಿಫಾರಸು ಮಾಡಿಲ್ಲ ಎಂದು ಲಸಿಕೆಯ ತಯಾರಕ ಸಂಸ್ಥೆಯಾಗಿರುವ ‘ಭಾರತ್‌ ಬಯೋಟೆಕ್‌’ ಗುರುವಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, ‘ಕೋವ್ಯಾಕ್ಸಿನ್‌ ಪಡೆದ ಮಕ್ಕಳು (15–18 ವರ್ಷ) 3 ಪ್ಯಾರಸಿಟಮಾಲ್ (500 ಮಿ.ಗ್ರಾಂ) ಮಾತ್ರೆಗಳನ್ನು ತೆಗೆದುಕೊಳ್ಳಲು ಕೆಲವು ಲಸಿಕಾ ಕೇಂದ್ರಗಳು ಶಿಫಾರಸು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೋವಾಕ್ಸಿನ್‌ ಲಸಿಕೆ ಹಾಕಿದ ನಂತರ ಯಾವುದೇ ಪ್ಯಾರಸಿಟಮಾಲ್ ಅಥವಾ ನೋವು ನಿವಾರಕಗಳನ್ನು ತೆಗೆದುಕೊಳ್ಳಲು ನಾವು ಶಿಫಾರಸು ಮಾಡಿಲ್ಲ,’ ಎಂದು ಭಾರತ್‌ ಬಯೋಟೆಕ್‌ ಹೇಳಿದೆ.

‘ಶೇ 10-20 ಜನರಿಗೆ ಲಸಿಕೆಯ ಅಡ್ಡಪರಿಣಾಮಗಳಾಗುವ ಸಾಧ್ಯತೆಗಳಿವೆ. ಇವುಗಳಲ್ಲಿ ಹೆಚ್ಚಿನವು ಸೌಮ್ಯವಾಗಿರುತ್ತವೆ. 1-2 ದಿನಗಳಲ್ಲಿ ಸರಿಹೋಗುತ್ತದೆ. ಇದಕ್ಕಾಗಿ ಔಷಧಿಗಳ ಅಗತ್ಯವಿಲ್ಲ ಎಂಬುದು 30,000 ಜನರನ್ನು ಒಳಗೊಂಡ ನಮ್ಮ ಕ್ಲಿನಿಕಲ್ ಪ್ರಯೋಗಗಳ ಮೂಲಕ ಗೊತ್ತಾಗಿದೆ. ಔಷಧಗಳನ್ನು ವೈದ್ಯರನ್ನು ಸಂಪರ್ಕಿಸದೇ ಪಡೆಯುವಂತಿಲ್ಲ,‘ ಎಂದು ಎಚ್ಚರಿಸಿದೆ.

‘ಕೋವಿಡ್‌ನ ಕೆಲವು ಲಸಿಕೆಗಳನ್ನು ಪಡೆದಾಗ ಪ್ಯಾರಸಿಟಮಾಲ್ ಅನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಕೋವ್ಯಾಕ್ಸಿನ್‌ಗೆ ಶಿಫಾರಸು ಮಾಡಿಲ್ಲ,’ ಎಂದು ಭಾರತ್‌ ಬಯೋಟೆಕ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT