ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಕೋರ್ಸ್‌ಗಳಿಗೆ ವಿವಿಗಳು ಭಾಗಶಃ ಅನುಮೋದನೆ ನೀಡಲಾಗದು: ಎಐಸಿಟಿಐ

Last Updated 17 ಫೆಬ್ರುವರಿ 2022, 15:26 IST
ಅಕ್ಷರ ಗಾತ್ರ

ನವದೆಹಲಿ: ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳಿಗೆ ಇನ್ನು ಮುಂದೆ ಭಾಗಶಃ ಅನುಮೋದನೆಯನ್ನು ನೀಡದಿರಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ತೀರ್ಮಾನಿಸಿದೆ.

‘ಕೆಲ ಕೇಂದ್ರೀಯ, ರಾಜ್ಯ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಕೆಲವು ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಭಾಗಶಃ ಅನುಮೋದನೆ ಪಡೆಯುತ್ತಿವೆ. ಇದು ಭಾಗಿದಾರರಲ್ಲಿ ಗೊಂದಲ ಮೂಡಿಸುತ್ತಿದೆ. ಇದನ್ನು ತಪ್ಪಿಸುವುದು ಇದರ ಉದ್ದೇಶ’ ಎಂದು ಎಐಸಿಟಿಇ ತಿಳಿಸಿದೆ.

ಇನ್ನು ಮುಂದೆ ವಿಶ್ವವಿದ್ಯಾಲಯಗಳು ಪೂರ್ಣ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆಯದೆಯೂ ಮುಂದುವರಿಯಬಹುದು. ತಾಂತ್ರಿಕ ಶಿಕ್ಷಣದಲ್ಲಿ ಹೊಸ ಕೋರ್ಸ್ ಅಥವಾ ವಿಭಾಗವನ್ನು ಆರಂಭಿಸಲು ಪೂರ್ವಾನುಮತಿ ಅನಗತ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ’ ಎಂದು ಎಐಸಿಟಿಇ ಸದಸ್ಯ ಕಾರ್ಯದರ್ಶಿ ರಾಜೀವ್ ಕುಮಾರ್‌ ಅವರು ತಿಳಿಸಿದ್ದಾರೆ.

‘ಆದರೆ, ಎಐಸಿಟಿಇಯು ರೂಪಿಸಿರುವ ಮಾನದಂಡ ಮತ್ತು ನಿಯಮಗಳಿಗೆ ವಿಶ್ವವಿದ್ಯಾಲಯಗಳು ಬದ್ಧರಾಗಿರುವುದು ಅಗತ್ಯ. ತಾಂತ್ರಿಕ ಶಿಕ್ಷಣದ ಸಮಗ್ರ ಬೆಳವಣಿಗೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಎಐಸಿಟಿಇ ವಿಶ್ವವಿದ್ಯಾಲಯಗಳಲ್ಲಿ ಪರಿಶೀಲನೆ ಕೈಗೊಳ್ಳಬಹುದು. ಇದು, ಎಐಸಿಟಿಇಯ ಚಾಲ್ತಿಯಲ್ಲಿರುವ ನಿಯಮಗಳಿಗೆ ಅನುಸಾರವಾಗಿ ನಡೆಯಲಿದೆ’ ಎಂದು ಹೇಳಿದರು.

‘ಅಲ್ಲದೆ, ಮಾನ್ಯತೆಯನ್ನು ಪಡೆದಿರುವ ಎಲ್ಲ ಸಂಸ್ಥೆಗಳು ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಪೂರಕವಾಗಿ ಎಐಸಿಟಿಯ ಪೂರ್ವಾನುಮತಿ ಪಡೆಯುವುದು ಅಗತ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT