ಮಂಗಳವಾರ, ಜುಲೈ 27, 2021
21 °C

ಸರ್ಕಾರಿ ನೌಕರರು ಲಸಿಕೆ ಪಡೆಯದಿದ್ದರೆ, ವೇತನ ಇಲ್ಲ: ಉಜ್ಜೈನಿ ಜಿಲ್ಲಾಡಳಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಉಜ್ಜೈನಿ: ‘ಲಸಿಕೆ ಪಡೆಯದಿದ್ದರೆ, ಮುಂದಿನ ತಿಂಗಳಿನಿಂದ ಸರ್ಕಾರಿ ನೌಕರರಿಗೆ ವೇತನ ನೀಡಲಾಗುವುದಿಲ್ಲ’ ಎಂದು ಮಧ್ಯಪ್ರದೇಶದ ಉಜ್ಜೈನಿ ಜಿಲ್ಲಾಡಳಿತ ಹೇಳಿದೆ.

‘ಈ ಕುರಿತು ಜಿಲ್ಲಾಧಿಕಾರಿ ಆಶಿಷ್‌ ಸಿಂಗ್ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ನೌಕರರು ಜುಲೈ 31ರೊಳಗೆ ಲಸಿಕೆ ಪಡೆಯದಿದ್ದರೆ, ಜುಲೈ ತಿಂಗಳ ವೇತನ ತಡೆಹಿಡಿಯಲಾಗುವುದು. ಲಸಿಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ ಬಳಿಕ ವೇತನ ನೀಡಲಾಗುವುದು’ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಜಿಲ್ಲೆಯಲ್ಲಿ ಶೇಕಡಾವಾರು ಲಸಿಕಾ ಗುರಿಯನ್ನು ಸಾಧಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಆಶಿಷ್‌ ಸಿಂಗ್ ತಿಳಿಸಿದರು.

‘ಲಸಿಕೆ ಪಡೆದಿರುವುದು ಖಚಿತವಾದ ನಂತರವೇ ವೇತನ ವಿತರಣೆ ಮಾಡುವಂತೆ ಜಿಲ್ಲಾ ಖಜಾನೆ ಅಧಿಕಾರಿಗೆ ಸೂಚಿಸಲಾಗಿದೆ. ಅಲ್ಲದೆ ಕೋವಿಡ್‌ ಲಸಿಕೆ ಪಡೆದ ಸರ್ಕಾರಿ ನೌಕರರ ಮಾಹಿತಿ ಸಂಗ್ರಹಿಸುವಂತೆಯೂ ಹೇಳಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು