ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮಾತ್ರವಲ್ಲ ಬಿಎಸ್‌ಪಿ, ಎಸ್‌ಪಿ, ಎನ್‌ಸಿಪಿಯೂ ಗೆದ್ದಿಲ್ಲ: ರಾಹುಲ್

Last Updated 3 ಏಪ್ರಿಲ್ 2021, 2:14 IST
ಅಕ್ಷರ ಗಾತ್ರ

ನವದೆಹಲಿ:ದೇಶದಲ್ಲಿ ನಡೆದ ಚುನಾವಣೆಗಳಲ್ಲಿಕಾಂಗ್ರೆಸ್‌ ಮಾತ್ರವಲ್ಲ, ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ನ್ಯಾಷನಲಿಷ್ಟ್‌ ಕಾಂಗ್ರೆಸ್‌ ಪಕ್ಷಯೂ (ಎನ್‌ಸಿಪಿ) ಜಯ ಸಾಧಿಸಿಲ್ಲ ಎಂದು ಕಾಂಗ್ರೆಸ್‌ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.ಬಿಜೆಪಿಯು ದೇಶದಸಾಂಸ್ಥಿಕ ಚೌಕಟ್ಟನ್ನು ಸಂಪೂರ್ಣವಾಗಿ ಸೆರೆಹಿಡಿದಿರುವುದು ಮತ್ತುಅದರ ಆರ್ಥಿಕ, ಮಾಧ್ಯಮ ಪ್ರಾಬಲ್ಯ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಯುಎಸ್‌ನರಾಜಕೀಯ ವ್ಯವಹಾರಗಳಮಾಜಿ ಉಪಕಾರ್ಯದರ್ಶಿ ಮತ್ತು ಹಾರ್ವರ್ಡ್‌ ಕೆನಡಿ ಶಾಲೆಯ ಪ್ರಾಧ್ಯಾಪಕನಿಕೋಲಸ್‌ ಬರ್ನ್ಸ್‌ ಅವರೊಂದಿಗೆ ವರ್ಚುವಲ್‌ಸಂವಾದದಲ್ಲಿ ಭಾಗವಹಿಸಿದ ರಾಹುಲ್‌, ʼಅಸ್ಸಾಂನಲ್ಲಿ ನಮ್ಮ ಪಕ್ಷದ ಪ್ರಚಾರ ನಡೆಸುತ್ತಿರುವ ಸಂಭಾವಿತರೊಬ್ಬರು, ಬಿಜೆಪಿ ಅಭ್ಯರ್ಥಿಗಳು ತಮ್ಮ ಕಾರುಗಳಲ್ಲಿ ಮತದಾನ ಯಂತ್ರಗಳನ್ನು ಸಾಗಿಸುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.ಆದರೆ, ರಾಷ್ಟ್ರೀಯ ಮಾಧ್ಯಮಗಳಲ್ಲಿಈ ಬಗ್ಗೆಚರ್ಚೆಯಾಗುತ್ತಿಲ್ಲʼ ಎಂದು ದೂರಿದ್ದಾರೆ.

ʼಈ ದೇಶದ ಸಾಂಸ್ಥಿಕ ಚೌಕಟ್ಟನ್ನುಸಂಪೂರ್ಣವಾಗಿ ಸೆರೆಹಿಡಿಯಲಾಗಿದೆ.ಬಿಜೆಪಿಗೆ ಸಂಪೂರ್ಣ ಆರ್ಥಿಕ ಮತ್ತು ಮಾಧ್ಯಮ ಪ್ರಾಬಲ್ಯವಿದೆ.ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬಿಎಸ್‌ಪಿ, ಎಸ್‌ಪಿ, ಎನ್‌ಸಿಪಿಯೂ ಚುನಾವಣೆಯಲ್ಲಿ ಗೆಲ್ಲುತ್ತಿಲ್ಲʼ ಎಂದು ಹೇಳಿದ್ದಾರೆ.

ʼಚುನಾವಣೆಗಳಲ್ಲಿ ಹೋರಾಡಲು ನನಗೆ ಸಾಂಸ್ಥಿಕ ಚೌಕಟ್ಟು ಬೇಕು, ನನ್ನನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ಬೇಕು. ನನಗೆ ಮುಕ್ತವಾದ ಮಾಧ್ಯಮ ಬೇಕು. ಆರ್ಥಿಕ ಸಮಾನತೆ ಬೇಕು. ರಾಜಕೀಯ ಪಕ್ಷವನ್ನು ನಿರ್ವಹಿಸಲು ಅನುವು ಮಾಡಿಕೊಡುವ ಸಂಪೂರ್ಣ ರಚನಾತ್ಮಕ ವ್ಯವಸ್ಥೆಗಳುಬೇಕು. ನಾನು ಅವುಗಳನ್ನುಪಡೆದಿಲ್ಲʼ ಎಂದುಕಿಡಿಕಾರಿದ್ದಾರೆ.

ಅಸ್ಸಾಂನ ರತಬಾಡಿ ವಿಧಾನಸಭಾಕ್ಷೇತ್ರದ ಮತಗಟ್ಟೆಯೊಂದರ ಚುನಾವಣಾಧಿಕಾರಿಯುಮತದಾನದ ಬಳಿಕ ಮತಯಂತ್ರವನ್ನು ಬಿಜೆಪಿ ಅಭ್ಯರ್ಥಿಯ ಪತ್ನಿಯ ಕಾರಿನಲ್ಲಿ ಸಾಗಿಸಿದ್ದು ಪತ್ತೆಯಾಗಿತ್ತು.ಹೀಗಾಗಿ ಈ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗವು ಆದೇಶಿಸಿದೆ.ಮಾತ್ರವಲ್ಲದೆ,ಚುನಾವಣಾಧಿಕಾರಿ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಆಯೋಗವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT