ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಯುವಜನತೆಗೆ ಯಾವುದೂ ಅಸಾಧ್ಯವಲ್ಲ: ನರೇಂದ್ರ ಮೋದಿ

Last Updated 5 ಫೆಬ್ರುವರಿ 2023, 13:22 IST
ಅಕ್ಷರ ಗಾತ್ರ

ಜೈಪುರ: ಭಾರತೀಯ ಯುವಜನತೆಗೆ ಯಾವುದೂ ಅಸಾಧ್ಯವಲ್ಲ. ಅವರಿಗೆ ಕ್ರೀಡೆಗಳಲ್ಲಿ ವೃತ್ತಿಜೀವನ ಮುಂದುವರಿಸಲು ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜೈಪುರ ಗ್ರಾಮಾಂತರ ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ಜೈಪುರದಲ್ಲಿ ಆಯೋಜಿಸಿರುವ ಮಹಾಖೇಲ್‌ (ಬೃಹತ್‌ ಕ್ರೀಡಾಕೂಟ) ಅನ್ನು ವರ್ಚುವಲ್‌ ಮೂಲಕ ಉದ್ದೇಶಿ ಅವರು ಮಾತನಾಡಿದರು.

‘ದೇಶದ ಯುವ ಪೀಳಿಗೆಗೆ ಯಾವುದೂ ಅಸಾಧ್ಯವಲ್ಲ. ಕ್ರೀಡೆಗಳನ್ನು ವೃತ್ತಿಯಾಗಿ ಸ್ವೀಕರಿಸಲು ನಾವು ಯುವಜನರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಪ್ರಮುಖ ಕ್ರೀಡಾಕೂಟಗಳಿಗೆ ತಯಾರಿ ನಡೆಸುವಲ್ಲಿ ಟಿಒಪಿಎಸ್‌ನಂತಹ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ) ಉಪಕ್ರಮಗಳು ಯುವಜನರಿಗೆ ಅನುಕೂಲಕರವಾಗಿವೆ’ ಎಂದು ಮೋದಿ ಹೇಳಿದರು.

ರಾಜಸ್ಥಾನವು ಯುವಜನರಿಂದ ಕೂಡಿದ್ದು, ಉತ್ಸಾಹ ಮತ್ತು ಹುಮ್ಮಸ್ಸಿಗೆ ಹೆಸರುವಾಸಿಯಾಗಿದೆ. ಜೈಪುರ ಮಹಾಖೇಲ್ ಕ್ರೀಡಾ ಪ್ರತಿಭೆಗಳ ಮಹಾಸಂಭ್ರಮವೆನಿಸಿದೆ. ಇಂತಹ ಕ್ರೀಡೋತ್ಸವಗಳು ಕ್ರೀಡೆಗಳ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.

ಜ.12 ರಂದು ರಾಷ್ಟ್ರೀಯ ಯುವ ದಿನದಂದು ಪ್ರಾರಂಭವಾದ ಕ್ರೀಡಾಕೂಟ ಈ ವರ್ಷ ಕಬಡ್ಡಿಯನ್ನು ಕೇಂದ್ರೀಕರಿಸಿತ್ತು. ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರದ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 450 ಗ್ರಾಮ ಪಂಚಾಯಿತಿಗಳು, ಪುರಸಭೆಗಳು ಮತ್ತು ವಾರ್ಡ್‌ಗಳಿಂದ 6,400ಕ್ಕೂ ಹೆಚ್ಚು ಯುವಕರು ಮತ್ತು ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT