ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಆರ್ಥಿಕ ಪುನಃಶ್ಚೇತನಕ್ಕೆ ಮನ ಮೋಹನ್ ಸಿಂಗ್ ನೀಡಿದ ಮೂರು ಸಲಹೆಗಳು

Last Updated 10 ಆಗಸ್ಟ್ 2020, 14:28 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಏಕಾಏಕಿ ಪ್ರಪಂಚದಾದ್ಯಂತ ಎಲ್ಲ ರೀತಿಯ ವ್ಯವಹಾರಗಳ ಮೇಲೆ ಒಂದಲ್ಲ ಒಂದು ರೀತಿಪರಿಣಾಮ ಬೀರಿದೆ. ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಅವರು ಆರ್ಥಿಕತೆ ಚೇತರಿಕೆಗೆ ತಕ್ಷಣ ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳ ಬಗ್ಗೆ ಅವರು ಬಿಬಿಸಿಗೆ ನೀಡಿರುವ ಇಮೇಲ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರಸಿಂಹ ರಾವ್ ಅವರೊಂದಿಗೆ ಆರ್ಥಿಕ ಸುಧಾರಣೆಗಳನ್ನು ರೂಪಿಸಿದಮನ ಮೋಹನ್ ಸಿಂಗ್ ಅವರು, ಕೋವಿಡ್-19 ಪ್ರೇರಿತ ಮಂದಗತಿಯನ್ನು ಮಾನವೀಯ ಬಿಕ್ಕಟ್ಟು ಎಂದು ಕರೆದಿದ್ದಾರೆ.

ಕೋವಿಡ್ ಸಮಯದಲ್ಲಿ ಸರ್ಕಾರದ ಆಘಾತಕಾರಿ ಲಾಕ್‌ಡೌನ್ ಮತ್ತು ಅದರ ನಿಯಮಗಳು ಆರ್ಥಿಕತೆಗೆ ಸಹಾಯ ಮಾಡಲಿಲ್ಲ.ಬಹುಶಃ ಆ ಹಂತದಲ್ಲಿ ಲಾಕ್‌ಡೌನ್ ಅನಿವಾರ್ಯ ಆಯ್ಕೆಯಾಗಿರಬಹುದು. (ಆದರೆ) ಹಠಾತ್ತನೆ ಲಾಕ್‌ಡೌನ್ ಘೋಷಣೆ ಮತ್ತು ಲಾಕ್‌ಡೌನ್‌ನ ಕಠಿಣ ಅನುಷ್ಠಾನದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿ ಯೋಚಿಸಬೇಕಿತ್ತುಎಂದು ಸಿಂಗ್ ಹೇಳಿದ್ದಾರೆ.

ಸಿಂಗ್ ನೀಡಿದ ಮೂರು ಸಲಹೆಗಳು

1. ನೇರ ನಗದು ವರ್ಗಾವಣೆಯ ಮೂಲಕ ಜನರ ಜೀವನೋಪಾಯವನ್ನು ರಕ್ಷಿಸಿ ಮತ್ತು ಅವರ ಖರ್ಚು ಮಾಡುವ ಶಕ್ತಿಯನ್ನು ಉಳಿಸಿಕೊಳ್ಳಿ.

2. ಸರ್ಕಾರಿ ಬೆಂಬಲಿತ ಸಾಲ ಖಾತರಿ ಕಾರ್ಯಕ್ರಮಗಳ ಮೂಲಕ ವ್ಯವಹಾರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ದೊರಕುವಂತೆ ನೋಡಿಕೊಳ್ಳಿ.

3. ಸಾಂಸ್ಥಿಕ ಸ್ವಾಯತ್ತತೆ ಮತ್ತು ಪ್ರಕ್ರಿಯೆಗಳ ಮೂಲಕ ಹಣಕಾಸು ವಲಯಗಳನ್ನು ಸರಿಪಡಿಸಿ.

'ಇಂದಿನ ಆರ್ಥಿಕ ಪರಿಸ್ಥಿತಿಯು ಅದರ ಸರ್ವವ್ಯಾಪಿ ಸ್ವರೂಪ, ಅಗಾಧಪ್ರಮಾಣ ಮತ್ತು ಆಳದಲ್ಲಿ ಅಭೂತಪೂರ್ವವಾಗಿದೆ' ಎಂದು ಸಿಂಗ್ ಬಿಬಿಸಿಗೆ ತಿಳಿಸಿದ್ದಾರೆ. 'ಎರಡನೆಯ ಮಹಾಯುದ್ಧದ ಸಮಯದಲ್ಲಿ ಕೂಡ ಇಡೀ ಜಗತ್ತು ಈಗಿನಂತೆ ಸ್ಧಬ್ಧವಾಗಿರಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಿಲಿಟರಿ, ಆರೋಗ್ಯ ಮತ್ತು ಆರ್ಥಿಕ ಸವಾಲುಗಳನ್ನು ಪೂರೈಸಲು ನಾವು ಜಿಡಿಪಿಯ ಹೆಚ್ಚುವರಿ ಶೇ 10 ರಷ್ಟನ್ನು ಖರ್ಚು ಮಾಡಬೇಕಾಗಿದ್ದರೂ ಕೂಡ, ಹಿಂಜರಿಯದೇ ಆ ಕೆಲಸ ಮಾಡಬೇಕು.ಭಾರತವು ಸಾಲ ಪಡೆಯಲು ನಾಚಿಕೆಪಡಬಾರದು. ಆದರೆ, ಆ ಸಾಲವನ್ನು ಅದು ಹೇಗೆ ಬಳಸುತ್ತದೆ ಎಂಬುದರ ಬಗ್ಗೆ ವಿವೇಚನೆ ಇರಬೇಕು ಎಂದು ಹೇಳಿದ್ದಾರೆ.

(ಹಣಕಾಸಿನ) ಕೊರತೆಯನ್ನು ನೀಗಿಸುವ ಆಯ್ಕೆಯಾಗಿ ನೋಟು ಮುದ್ರಣವನ್ನು ಡಾ. ಸಿಂಗ್ ತಳ್ಳಿಹಾಕಿಲ್ಲ.ಆ ಈ ಕ್ರಮಕ್ಕೆ ಮುಂದಾಗುವ ಮೊದಲು ಕಠಿಣ ನಿಬಂಧನೆಗಳನ್ನು ಪೂರೈಸಬೇಕು.ಇದು ಕೊನೆಯ ಆಯ್ಕೆಯಉಪಾಯವಾಗಿರಬೇಕು ಎಂದು ಅವರು ಸಲಹೆ ನೀಡಿದರು.

ಇತರ ರಾಷ್ಟ್ರಗಳ ನಡೆಯನ್ನು ಅನುಸರಿಸುವ ಮೂಲಕ ಆಮದಿನ ಮೇಲೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕಳೆದ ಮೂರು ದಶಕಗಳಲ್ಲಿ ಭಾರತದ ವ್ಯಾಪಾರ ನೀತಿಯು ಎಲ್ಲ ವರ್ಗಗಳಿಗೂ ಅಗಾಧವಾದ ಆರ್ಥಿಕ ಲಾಭಗಳನ್ನು ತಂದು ಕೊಟ್ಟಿದೆ' ಎಂದು ಹೇಳಿದ್ದಾರೆ.

'ಈ ಹಿಂದೆ ಉದ್ಭವಿಸುತ್ತಿದ್ದ ಆರ್ಥಿಕಬಿಕ್ಕಟ್ಟುಗಳ ಸ್ವರೂಪ ಸ್ಥೂಲರೂಪದ್ದಾಗಿದ್ದವು.ಅವನ್ನು ನಿರ್ವಹಿಸಲು ಸಶಕ್ತಆರ್ಥಿಕ ಸಾಧನಗಳಿದ್ದವು. ಈಗ ನಾವು ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ, ಅದು ಸಮಾಜದಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿದೆ.ಈ ಬಿಕ್ಕಟ್ಟನ್ನು ಎದುರಿಸಲು ಆರ್ಥಿಕ ಸಾಧನ ಅತ್ಯಗತ್ಯ. ಅದನ್ನು ರೂಪಿಸಬೇಕಿದ್ದವಿತ್ತೀಯ ನೀತಿಯು ಮೊಂಡಾಗಿದೆ' ಎಂದು ಸಿಂಗ್ ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT