ಭಾನುವಾರ, ಜುಲೈ 3, 2022
25 °C

ಚಂಡೀಗಡದ ಬುರೈಲ್ ಜೈಲಿನ ಬಳಿ ಸ್ಪೋಟಕ ಪತ್ತೆ: ಎನ್‌ಎಸ್‌ಜಿಯಿಂದ ನಿಷ್ಕ್ರಿಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಇಲ್ಲಿನ ಬುರೈಲ್ ಜೈಲಿನ ಆವರಣ ಗೋಡೆಯ ಬಳಿ ಬ್ಯಾಗ್‌ವೊಂದರಲ್ಲಿ ಸ್ಪೋಟಕ ವಸ್ತು ಪತ್ತೆಯಾಗಿದ್ದು, ರಾಷ್ಟ್ರೀಯ ಭದ್ರತಾ ಪಡೆಯ ಸಿಬ್ಬಂದಿ (ಎನ್‌ಎಸ್‌ಜಿ) ಅದನ್ನು ಭಾನುವಾರ ನಿಷ್ಕ್ರಿಯಗೊಳಿಸಿದ್ದಾರೆ.

‘ಶನಿವಾರ ಸಂಜೆ ಬ್ಯಾಗ್‌ ಪತ್ತೆಯಾಗಿದೆ. ಅದರಲ್ಲಿ ಪೆಟ್ಟಿಗೆ, ಸುಟ್ಟ ವಯರ್‌ಗಳು ಮತ್ತು ಸ್ಪೋಟಕ ವಸ್ತುಗಳು ಇದ್ದವು. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಚಂಡಿಗಡದ ಎಸ್‌ಎಸ್‌ಪಿ ಕುಲದೀಪ್‌ ಚಹಲ್‌ ಅವರು ಹೇಳಿದ್ದಾರೆ.  

‍ಈಗಾಗಲೇ ಜೈಲು ಆವರಣವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಗ್ನಿಶಾಮಕ ವಾಹನವನ್ನು ಅಲ್ಲಿ ನಿಯೋಜಿಸಲಾಗಿದೆ. ಜೈಲಿನ ಬಳಿಯ ರಸ್ತೆಯಲ್ಲಿ ಜನರ ಹಾಗೂ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು