ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್‌: ಎನ್‌ಟಿಎಜಿಐ ಚರ್ಚೆ ಸಾಧ್ಯತೆ

Last Updated 7 ಜೂನ್ 2022, 16:07 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ವಿರುದ್ಧ ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್‌ ಸಂಪೂರ್ಣ ಲಸಿಕೆ ಪಡೆದವರಿಗೆಬಯಾಲಾಜಿಕಲ್–ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರ್ಬೆವ್ಯಾಕ್ಸ್ಅನ್ನು ಬೂಸ್ಟರ್ ಆಗಿ ನೀಡಲು ಅನುಮತಿಸುವುದು, ಎರಡನೇ ಡೋಸ್ ಮತ್ತು ಬೂಸ್ಟರ್‌ ಡೋಸ್ ನಡುವಿನ ಅಂತರ ಆರು ತಿಂಗಳಿಗೆ ಇಳಿಸುವ ಬಗ್ಗೆ ಶೀಘ್ರವೇ ನಡೆಯಲಿರುವ ಎನ್‌ಟಿಎಜಿಐ ಸಭೆಯಲ್ಲಿ ಚರ್ಚಿಸುವಸಾಧ್ಯತೆಯಿದೆ.

ಸದ್ಯದ ನಿಯಮದಂತೆ 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಲಸಿಕೆಯ ಎರಡನೇ ಡೋಸ್ ಪೂರ್ಣಗೊಳಿಸಿದವರು ಒಂಬತ್ತು ತಿಂಗಳು ಪೂರ್ಣಗೊಳಿಸಿದ ನಂತರ ಬೂಸ್ಟರ್‌ ಡೋಸ್‌ ಪಡೆಯಬಹುದಾಗಿದೆ.

ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಎರಡುಡೋಸ್‌ಗಳನ್ನು ಪಡೆದ 18 ವರ್ಷ ಮೇಲ್ಪಟ್ಟವರಿಗೂ ಮೂರನೇಡೋಸ್ (ಬೂಸ್ಟರ್‌ ಡೋಸ್‌) ಆಗಿ ಕೊರ್ಬೆವ್ಯಾಕ್ಸ್ ಲಸಿಕೆಗೆ ಭಾರತೀಯ ಔಷಧ ಮಹಾ ನಿಯಂತ್ರಕ (ಡಿಸಿಜಿಐ) ಕಳೆದ ಭಾನುವಾರಷ್ಟೇ ಅನುಮತಿ ನೀಡಿದೆ. 5ರಿಂದ 12ರ ವಯಸ್ಸಿನ ಮಕ್ಕಳಿಗೆ ನೀಡಿರುವ ಕೊರ್ಬೆವ್ಯಾಕ್ಸ್‌ ಲಸಿಕೆಗಳ ಅಂಕಿ–ಅಂಶಗಳನ್ನುಎನ್‌ಟಿಎಜಿಐ ಸಲಹಾ ಸಮಿತಿ ಪರಿಶೀಲಿಸಲಿದೆ ಎಂದು ಮೂಲಗಳು ಹೇಳಿವೆ.

ಕೊರ್ಬೆವ್ಯಾಕ್ಸ್12ರಿಂದ 14 ವರ್ಷದ ಮಕ್ಕಳಿಗೆದೇಶದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದಮೊದಲ ಲಸಿಕೆ ಎನಿಸಿದೆ. ಬೇರೆ ಕಂಪನಿಗಳ ಮೊದಲ ಎರಡು ಡೋಸ್‌ ಲಸಿಕೆಗಳನ್ನು ಪಡೆದಿರುವ ವ್ಯಕ್ತಿಗೆ ಮತ್ತೊಂದು ಕಂಪನಿಯ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ದೇಶದಲ್ಲಿ ಅನುಮತಿ ಸಿಕ್ಕಿರುವುದು ಇದೇ ಮೊದಲು.

ಕೋವಿಡ್‌: 3,714 ಹೊಸ ಪ್ರಕರಣ ದೃಢ
ದೇಶದಾದ್ಯಂತ ಮಂಗಳವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಹೊಸದಾಗಿ 3,714 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸೋಮವಾರಕ್ಕೆ (4,518) ಹೋಲಿಸಿದರೆ ಈ ಪ್ರಮಾಣ ತುಸು ಕಡಿಮೆಯಾಗಿದೆ.

ಈ ಅವಧಿಯಲ್ಲಿ 7 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೆ 4.31 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಒಟ್ಟು 5,24,708 ಮಂದಿ ಮೃತಪಟ್ಟಿದ್ದಾರೆ.ಸಕ್ರಿಯ ಪ್ರಕರಣಗಳ ಸಂಖ್ಯೆ 26,976ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಕೆಮ್ಮು, ನೆಗಡಿಗೆ ಚೀಟಿ ರಹಿತ ಔಷಧ’
ಕೆಮ್ಮು, ಶೀತ, ನೋವು ನಿವಾರಕ ಹಾಗೂ ಚರ್ಮದ ತುರಿಕೆ ಶಮನಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರಾಸಿಟಮಾಲ್, ಮೂಗಿನ ಡ್ರಾಪ್ಸ್‌ ಮತ್ತು ಫಂಗಸ್‌ ತಡೆಯುವ ಆ್ಯಂಟಿಬಯಾಟಿಕ್‌ ಸೇರಿ 16 ಸಾಮಾನ್ಯ ಔಷಧಗಳು ವೈದ್ಯರ ಚೀಟಿ ಇಲ್ಲದೇ ಇನ್ನು ಮುಂದೆ ಔಷಧಾಲಯಗಳಲ್ಲಿ ಲಭಿಸಲಿವೆ.

ಕೇಂದ್ರ ಆರೋಗ್ಯ ಸಚಿವಾಲಯವು 1945ರ ಔಷಧ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದೆ. ಅಂತಹ 16 ಔಷಧಗಳನ್ನು ಶೆಡ್ಯೂಲ್ ಕೆ ಅಡಿಯಲ್ಲಿ ತರಲು ವೈದ್ಯರ ಪ್ರಿಸ್ಕ್ರಿಪ್ಷನ್‌ಗೆ ವಿನಾಯಿತಿ ನೀಡುವ ಮೂಲಕ, ಅವುಗಳನ್ನು ಮಾನ್ಯತೆಯ ಚಿಲ್ಲರೆ ಔಷಧ ಮಾರಾಟಗಾರರು ‘ಓವರ್‌ –ದಿ-ಕೌಂಟರ್‌ (ಒಟಿಸಿ)’ ವರ್ಗದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ ಕೋರಿ ಆರೋಗ್ಯ ಸಚಿವಾಲಯಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT