ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ಅವಧಿ ಮೀರಿ ಭಾರತದಲ್ಲೇ ನೆಲೆಸಿರುವ 3.93 ಲಕ್ಷ ವಿದೇಶಿಗರು: ಕೇಂದ್ರ ಮಾಹಿತಿ

Last Updated 5 ಏಪ್ರಿಲ್ 2022, 10:00 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು 3.93 ಲಕ್ಷ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

ಕಳೆದ ವರ್ಷ ಡಿಸೆಂಬರ್‌ ವರೆಗಿನ ಅಂಕಿಅಂಶದ ಪ್ರಕಾರ ಸುಮಾರು 3.93 ಲಕ್ಷ ವಿದೇಶಿಗರು ವೀಸಾ ಅವಧಿ ಮೀರಿ ರಾಷ್ಟ್ರದಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಹೇಳಿದ್ದಾರೆ.

'2019ರಲ್ಲಿ ವೀಸಾ ಅವಧಿ ಮೀರಿದ 25,143 ವಿದೇಶಿಗರು ಭಾರತದಿಂದ ಹಿಂತಿರುಗಿಲ್ಲ. 2020ರಲ್ಲಿ ವೀಸಾ ಅವಧಿ ಮುಗಿದ 40,239 ವಿದೇಶಿಗರು ರಾಷ್ಟ್ರದಲ್ಲೇ ನೆಲೆಸಿದ್ದಾರೆ. 2021ರಲ್ಲಿ ವೀಸಾ ಅವಧಿ ಮುಗಿದ 54,576 ವಿದೇಶಿಗರು ತಮ್ಮ ರಾಷ್ಟ್ರಕ್ಕೆ ವಾಪಸ್ ಆಗಿಲ್ಲ. ಒಟ್ಟಾರೆ 2019ರಿಂದ ಡಿಸೆಂಬರ್‌ 31, 2021ರ ವರೆಗೆ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲೇ ನೆಲೆಸಿರುವ ವಿದೇಶಿಗರ ಸಂಖ್ಯೆ 3,93,421' ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸಚಿವ ನಿತ್ಯಾನಂದ ರೈ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ರಾಷ್ಟ್ರದಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರೈ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT