ಸೋಮವಾರ, ಜುಲೈ 26, 2021
22 °C

ಸಂಸದೆ ನುಸ್ರತ್ ಜಹಾನ್ ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ: ದಿಲೀಪ್ ಘೋಷ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು, ಸಂಸದೆ ನುಸ್ರತ್ ಜಹಾನ್ ಅವರ ವೈವಾಹಿಕ ಸ್ಥಾನಮಾನದ ಬಗ್ಗೆ ವಾಗ್ದಾಳಿ ನಡೆಸಿದ್ದು, ನುಸ್ರತ್ ಅವರು ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

'ನುಸ್ರತ್ ಜಹಾನ್ ಅವರು ಮಹಿಳಾ ಸಂಸದರಾಗಿದ್ದಾರೆ. ಅವರು ಸಿಂಧೂರವನ್ನು ಹಣೆಗಿಡುವ ಮೂಲಕ, ವ್ಯಕ್ತಿಯೊಬ್ಬನನ್ನು ಪತಿ ಎಂದು ಸಂಭೋದಿಸುವ ಮೂಲಕ, ಮುಖ್ಯಮಂತ್ರಿಯನ್ನು ತನ್ನ ಆರತಕ್ಷತೆಗೆ ಆಹ್ವಾನಿಸುವ ಮೂಲಕ ಮತ್ತು ಈಗ ವಿವಾಹವೇ ಆಗಿಲ್ಲ ಎನ್ನುವ ಮೂಲಕ ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ' ಎಂದು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿರುವುದಾಗಿ ವರದಿಯಾಗಿದೆ.

'ಇದು ಟಿಎಂಸಿ ಸಂಸದರ ಸಿದ್ಧಾಂತವಾಗಬಹುದೇ ಹೊರತು ಭಾರತ ಅಥವಾ ಪಶ್ಚಿಮ ಬಂಗಾಳದ ಸಿದ್ಧಾಂತವಲ್ಲ. ಪಕ್ಷವು ಆಕೆಯನ್ನು ಅಮಾನತುಗೊಳಿಸಬೇಕು ಅಥವಾ ನುಸ್ರತ್ ಅವರೇ ರಾಜೀನಾಮೆ ನೀಡಬೇಕು' ಎಂದು ಘೋಷ್ ಒತ್ತಾಯಿಸಿದರು.

ಇದನ್ನೂ ಓದಿ: 

ಟಾಲಿವುಡ್‌ನ ಜನಪ್ರಿಯ ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರು 2019 ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಜತೆ ವಿವಾಹವಾಗಿದ್ದರು. ಉದ್ಯಮಿ ನಿಖಿಲ್ ಜೈನ್ ಜತೆಗಿನ ಮದುವೆ ಕಾನೂನುಬದ್ಧವಲ್ಲ. ಅವರ ಜತೆ ಲಿವ್–ಇನ್ ಸಂಬಂಧ ಹೊಂದಿದ್ದೆ. ಜೈನ್ ಜತೆಗಿನ ವಿವಾಹವು ಟರ್ಕಿಯ ಕಾನೂನಿಗೆ ಅನುಸಾರವಾಗಿ ನಡೆದಿರುವ ಕಾರಣ ಭಾರತೀಯ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: 

ಇತ್ತೀಚಿನ ದಿನಗಳಲ್ಲಿ ನಟ ಮತ್ತು ವಿಧಾನಸಭೆ ಅಭ್ಯರ್ಥಿಯಾಗಿದ್ದ ಯಶ್ ದಾಸ್‌ಗುಪ್ತಾ ಅವರೊಂದಿಗೆ ನುಸ್ರತ್ ಜಹಾನ್ ಅವರು ಡೇಟಿಂಗ್ ಮಾಡುತ್ತಿರುವುದಾಗಿ ವರದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು