ಸೋಮವಾರ, ಸೆಪ್ಟೆಂಬರ್ 27, 2021
27 °C

ವಿಡಿಯೊ: 'ಇವನು ನನ್ನ ಮಗ'ನೆಂದು ರಾಹುಲ್ ಗಾಂಧಿಯನ್ನು ಪರಿಚಯಿಸಿದ ನರ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

REUTERS

ವಯನಾಡು: ಕಾಂಗ್ರೆಸ್‌ ನಾಯಕ, ವಯನಾಡಿನ ಸಂಸದ ರಾಹುಲ್‌ ಗಾಂಧಿ ಅವರನ್ನು ನರ್ಸ್‌ ಒಬ್ಬರು 'ಇವನು ನನ್ನ ಮಗ' ಎಂದು ಪರಿಚಯಿಸಿಕೊಡುವ ವಿಡಿಯೊವನ್ನು ಕೇರಳ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಎರಡು ದಿನಗಳ ವಯನಾಡು ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಅವರಿಗೆ ನರ್ಸ್‌ ತನ್ನ ಮನೆಯನ್ನು ತೋರಿಸುತ್ತಿರುವುದು ಹಾಗೂ ಸಿಹಿ ತಿನಿಸನ್ನು ನೀಡುವುದು ವಿಡಿಯೋದಲ್ಲಿದೆ. 'ರಾಹುಲ್‌ ಗಾಂಧಿ ಜನಿಸುವಾಗ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ ರಾಜಮ್ಮ ಅಮ್ಮ ಅವರ ಹಿತಕರ ಪ್ರೀತಿ ಮತ್ತು ವಾತ್ಸಲ್ಯವಿದು' ಎಂದು ಕೇರಳ ಕಾಂಗ್ರೆಸ್‌ ಟ್ವೀಟ್‌ನಲ್ಲಿ ತಿಳಿಸಿದೆ.

ರಾಹುಲ್‌ ಗಾಂಧಿ ಅವರ ಭದ್ರತಾ ಸಿಬ್ಬಂದಿ ಜೊತೆಗೆ 'ಇವನು ನನ್ನ ಮಗ. ಇಲ್ಲಿರುವುದು ನನ್ನ ಮನೆ. ಇವನು ನನ್ನ ಮುಂದೆ ಜನಿಸಿದ್ದು. ನಿಮಗೆ ಅರ್ಥವಾಯ್ತಲ್ವ? ನೀವು ಇವನನ್ನು ನೋಡುವ ಮೊದಲೇ ನಾನಿವನನ್ನು ನೋಡಿದ್ದೇನೆ. ಆ ಅನುಭೋಗವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ' ಎಂದು ನರ್ಸ್‌ ರಾಜಮ್ಮ ಕಾಂಗ್ರೆಸ್‌ ನಾಯಕನನ್ನು ಪರಿಚಯಿಸಿಕೊಟ್ಟಾಗ ಎಲ್ಲರೂ ಮುಗುಳ್ನಕ್ಕಿದ್ದಾರೆ.

ಇದೇ ವೇಳೆ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ವಿಚಾರಿಸಿದ ರಾಜಮ್ಮ, ತಮ್ಮ ಶುಭಾಶಯಗಳನ್ನು ತಿಳಿಸುವಂತೆ ರಾಹುಲ್‌ಗೆ ಹೇಳಿದ್ದಾರೆ.

'ನಮ್ಮ ಮನೆಯಿಂದ ಕೊಡಬೇಕಾದ ತುಂಬ ವಸ್ತುಗಳಿವೆ. ಆದರೆ ನಿಮಗೆ ಸಮಯವಿಲ್ಲದ್ದರಿಂದ ಸಾಧ್ಯವಾಗುತ್ತಿಲ್ಲ. ನಾನು ಯಾವುದೇ ಪಕ್ಷ ಅಥವಾ ಬೇರೆ ಏನನ್ನು ನೋಡುವುದಿಲ್ಲ. ನೀನು ನನ್ನ ಮಗ. ನಾನು ನಿನಗೆ ಅಮ್ಮ' ಎಂದು ನರ್ಸ್‌ ರಾಜಮ್ಮ ತಿಳಿಸಿದ್ದಾರೆ. ರಾಜಮ್ಮ ಅವರ ವಾತ್ಸಲ್ಯಕ್ಕೆ ಸಾಮಾಜಿಕ ಜಾಲತಾಣವು ತಲೆದೂಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು