ಜಮ್ಮು ಕಾಶ್ಮೀರ: ಹಿಂಸಾತ್ಮಕ ಮಾಸವಾದ ಅಕ್ಟೋಬರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರವು ಅಕ್ಟೋಬರ್‌ನಲ್ಲಿ 44 ಹತ್ಯೆಗಳಿಗೆ ಸಾಕ್ಷಿಯಾಗಿದೆ. 2019ರ ಆಗಸ್ಟ್‌ನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರದ ತಿಂಗಳೊಂದರಲ್ಲಿ ನಡೆದ ಗರಿಷ್ಠ ಹತ್ಯೆಗಳಿವು.
ಕಳೆದ ತಿಂಗಳಿನಲ್ಲಿ 19 ಉಗ್ರಗಾಮಿಗಳು, 13 ನಾಗರಿಕರು (ಇದರಲ್ಲಿ ಮೂವರು ಅಲ್ಪಸಂಖ್ಯಾತ ಸಮುದಾಯದವರು–ಐವರು ವಲಸಿಗರು) ಮತ್ತು 12 ಭದ್ರತಾ ಪಡೆಗಳ ಸಿಬ್ಬಂದಿಗಳು ಉಗ್ರಗಾಮಿ ಕೃತ್ಯಗಳಲ್ಲಿ, ಉಗ್ರ ವಿರೋಧಿ ಕಾರ್ಯಚರಣೆಯಲ್ಲಿ ಹತರಾಗಿದ್ದಾರೆ.
ಲಷ್ಕರ್-ಎ-ತೊಯ್ಬಾ ಜತೆಗೆ ನಂಟು ಹೊಂದಿದ್ದ ಸ್ಥಳೀಯ ಉಗ್ರನನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ರಖಾಮಾ ಪ್ರದೇಶದಲ್ಲಿ ಅಕ್ಟೋಬರ್ 1 ರಂದು ಕೊಲ್ಲಲಾಯಿತು. ಇದರೊಂದಿಗೆ ಆರಂಭವಾದ ಅಕ್ಟೋಬರ್ ತಿಂಗಳ ರಕ್ತ ಚರಿತ್ರೆ 44 ಸಾವುಗಳಲ್ಲಿ ಅಂತ್ಯವಾಗಿದೆ.
ಆಗಸ್ಟ್ 5, 2019 ರ ನಂತರ ಅಕ್ಟೋಬರ್ ಅತ್ಯಂತ ಹಿಂಸಾತ್ಮಕ ತಿಂಗಳಾಗಿ ಉಳಿದುಕೊಂಡಿದೆ ಎಂದು ಸ್ವತಃ ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
‘ಜನರು ಶಾಂತಿ ಮತ್ತು ಅಭಿವೃದ್ಧಿಯತ್ತ ಸಾಗಲು ಬಯಸುತ್ತಾರೆ. ಅವರು ಹಿಂಸೆಗೆ ವಿರುದ್ಧವಾಗಿದ್ದಾರೆ. ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಬರುತ್ತಿದೆ,‘ ಎಂದೂ ಅವರು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.