ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನ ಎಲ್ಲ ಹುಡುಗಿಯರಿಗೂ ಬಾಯ್‌ಫ್ರೆಂಡ್ ಕಡ್ಡಾಯ: ನಕಲಿ ನೋಟಿಸ್ ಅವಾಂತರ

Last Updated 24 ಜನವರಿ 2023, 9:34 IST
ಅಕ್ಷರ ಗಾತ್ರ

ಪರದೀಪ್(ಒಡಿಶಾ): ಒಡಿಶಾದ ಜಗತ್‌ಸಿಂಗ್‌ಪುರದ ಕಾಲೇಜೊಂದರಲ್ಲಿ ಎಲ್ಲ ವಿದ್ಯಾರ್ಥಿನಿಯರು ವ್ಯಾಲಂಟೈನ್ಸ್ ಡೇ ಹೊತ್ತಿಗೆ ಕಡ್ಡಾಯವಾಗಿ ಬಾಯ್‌ಫ್ರೆಂಡ್ ಹೊಂದಿರಬೇಕು ಎಂದು ಹಾಕಲಾಗಿದ್ದ ನಕಲಿ ನೋಟಿಸ್ ಭಾರಿ ಗೊಂದಲ ಸೃಷ್ಟಿಸಿತ್ತು.

ನೋಟಿಸ್‌ನಲ್ಲಿ ಪ್ರಾಂಶುಪಾಲರ ಸಹಿಯನ್ನು ನಕಲು ಮಾಡಲಾಗಿತ್ತು. ಎಸ್‌ವಿಎಂ ಕಾಲೇಜಿನಲ್ಲಿ ನಡೆದ ಈ ಅವಾಂತರದ ನೋಟಿಸ್ ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡಿದೆ. ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ನಕಲಿ ನೋಟಿಸ್ ಹಾಕಿರುವುದು ನಮ್ಮ ಗಮನಕ್ಕೆ ಬಂದಿತು. ಕೆಲವು ಕಿಡಿಗೇಡಿಗಳು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕಾಲೇಜಿನ ಗೌರವಕ್ಕೆ ಕುಂದು ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ’ಎಂದು ಪ್ರಾಂಶುಪಾಲ ಬಿಜಯ್ ಕುಮಾರ್ ಹೇಳಿದ್ದಾರೆ.

ತಮ್ಮ ಘನತೆಗೆ ಧಕ್ಕೆ ತರಲು ಸಹಿ ನಕಲು ಮಾಡಲಾಗಿದೆ ಎಂದೂ ಅವರು ದೂರಿದ್ದು, ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT