ಮಂಗಳವಾರ, ಮಾರ್ಚ್ 9, 2021
28 °C

ಹಳೆಯ ಎಲೆಕ್ಟ್ರಿಕ್‌ ರೈಲ್ವೆ ಎಂಜಿನ್‌ಗೆ ಮರುಜೀವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಶತಮಾನಗಳಷ್ಟು ಹಳೆಯದಾದ ಎಲೆಕ್ಟ್ರಿಕ್‌ ರೈಲ್ವೆ ಎಂಜಿನ್‌ಗೆ ಮುಂಬೈ ವರ್ಲಿ ಪ್ರದೇಶದ ನೆಹರೂ ವಿಜ್ಞಾನ ಕೇಂದ್ರದಲ್ಲಿ ಮರು ಜೀವ ನೀಡಲಾಗಿದೆ.

ಮುಂಬೈನ ಮೊದಲ ಎಲೆಕ್ಟ್ರಿಕ್ ರೈಲು ನಾಲ್ಕು ಬೋಗಿಗಳನ್ನು ಹೊಂದಿತ್ತು. 1925ರ ಫೆಬ್ರುವರಿ 3ರಂದು ಮುಂಬೈನ ಅಂದಿನ ಗವರ್ನರ್‌ ಸರ್ ಎಲ್‌.ಒ. ವಿಲ್ಸನ್ ಅವರು ಈ ರೈಲು ಸೇವೆಗೆ ಚಾಲನೆ ನೀಡಿದ್ದರು.

ನಗರ ಬೆಳೆಯುತ್ತ ಹೋದಂತೆ ಜನರ ಬೇಡಿಕೆಯನ್ನು ಪೂರೈಸಲು 1927ರಲ್ಲಿ ಎಂಟು ಬೋಗಿಗಳನ್ನು ಪರಿಚಯಿಸಲಾಯಿತು. ಅಂದಾಜು 700ಕ್ಕೂ ಹೆಚ್ಚು ಜನರು ಪ್ರಯಾಣಿಸಬಹುದಾದ ಸಾಮರ್ಥ್ಯವನ್ನು ಇದು ಹೊಂದಿತ್ತು. ಮುಂಬೈನಲ್ಲಿ 1930–60ರವರೆಗೆ ಈ ರೈಲು ಸಾರ್ವಜನಿಕರಿಗೆ ಸೇವೆ ಒದಗಿಸಿತ್ತು. 

90 ವರ್ಷಗಳಷ್ಟು ಹಳೆಯದಾದ ಎಲೆಕ್ಟ್ರಿಕ್ ಎಂಜಿನ್ ಅನ್ನು 1979ರಲ್ಲಿ ಕೇಂದ್ರ ರೈಲ್ವೆ ದಾನವಾಗಿ ನೀಡಿತು.

‘ಪ್ರಾಚೀನ ಎಲೆಕ್ಟ್ರಿಕ್‌ ಎಂಜಿನ್‌ಗೆ ಮರು ಜೀವ ಕೊಡಲಾಗಿದೆ. ಶೀಘ್ರದಲ್ಲೇ ಮುಂಬೈ ಜನರ ಪ್ರದರ್ಶನಕ್ಕೆ ಇರಿಸಲಾಗುವುದು’ ಎಂದು ನೆಹರೂ ವಿಜ್ಞಾನ ಕೇಂದ್ರದ ನಿರ್ದೇಶಕ ಶಿವಪ್ರಸಾದ್ ಖೆನೆದ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು