ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ  75 ಆಮ್ ಆದ್ಮಿ ಕ್ಲಿನಿಕ್‌: ಸಿಎಂ ಭಗವಂತ್ ಮಾನ್ ಘೋಷಣೆ

Last Updated 15 ಆಗಸ್ಟ್ 2022, 9:31 IST
ಅಕ್ಷರ ಗಾತ್ರ

ಲುಧಿಯಾನ: ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆ ರಾಜ್ಯದ ಜನತೆಗಾಗಿ 75 ಆಮ್ ಆದ್ಮಿ ಕ್ಲಿನಿಕ್‌ಗಳನ್ನು (ಜನತಾ ಆಸ್ಪತ್ರೆಗಳು) ತೆರೆಯಲು ನಿರ್ಧರಿಸಿದ್ದಾರೆ.

ಸೋಮವಾರ ಲುಧಿಯಾನದ ಗುರು ನಾನಕ್ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಈ ಘೋಷಣೆ ಮಾಡಿದರು.

ಉದ್ದೇಶಿತ75 ಆಮ್ ಆದ್ಮಿ ಕ್ಲಿನಿಕ್‌ಗಳಲ್ಲಿ ನೂರಕ್ಕೂ ಹೆಚ್ಚು ಬಗೆಯ ವೈದ್ಯಕೀಯ ತಪಾಸಣೆಗಳನ್ನು ಉಚಿತವಾಗಿ ನೆರವೇರಿಸಲಾಗುವುದು. ಎಂಬಿಬಿಎಸ್ ವೈದ್ಯರನ್ನು ಒಳಗೊಳ್ಳುವ ಈ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಮಾನ್ ತಿಳಿಸಿದ್ದಾರೆ.

ಈ 75 ಆಸ್ಪತ್ರೆಗಳನ್ನು ಅತ್ಯಂತ ಮಾದರಿ ಎನ್ನುವಂತೆ ನಡೆಸಲಾಗುತ್ತದೆ. ಪರಿಣಾಮ ನೋಡಿಕೊಂಡು ರಾಜ್ಯದಲ್ಲಿ ಇದೇ ರೀತಿಯ ಮತ್ತಷ್ಟು ಆಸ್ಪತ್ರೆಗಳನ್ನು ತೆರೆಯಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಈಗಾಗಲೇ ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜುಲೈ 1 ರಿಂದ ಆರಂಭಿಸಲಾಗಿದೆ. ಒಬ್ಬ ಶಾಸಕ, ಒಂದು ಪಿಂಚಣಿಯೂ ಕೂಡ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT