ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ರಾಜಕುಮಾರನಿಗೆ ವಿನಾಯಿತಿ, ಮೋದಿ ಪ್ರಕರಣ ಉಲ್ಲೇಖಿಸಿದ ಅಮೆರಿಕ

ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣ
Last Updated 19 ನವೆಂಬರ್ 2022, 19:52 IST
ಅಕ್ಷರ ಗಾತ್ರ

ನವದೆಹಲಿ: ‘ವಾಷಿಂಗ್ಟನ್‌ ಪೋಸ್ಟ್’ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಗೆ ಸಂಬಂಧಿಸಿದಂತೆ ಸೌದಿ ರಾಜಕುಮಾರ ಮೊಹಮದ್‌ ಬಿನ್‌ ಸಲ್ಮಾನ್‌ಗೆ ವಿನಾಯಿತಿ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ವಿದೇಶಾಂಗ ಇಲಾಖೆ, 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾನೂನು ಕ್ರಮದಿಂದ ಇದೇ ರೀತಿಯ ರಕ್ಷಣೆ ನೀಡಿರುವುದಾಗಿ ಶುಕ್ರವಾರ ಹೇಳಿದೆ.

2018ರಲ್ಲಿ ನಡೆದ ಖಶೋಗ್ಗಿ ಕೊಲೆ ಪ್ರಕರಣದಲ್ಲಿಸೌದಿ ರಾಜಕುಮಾರ ಆರೋಪಿ.

ಖಶೋಗ್ಗಿ ಹತ್ಯೆಗೆ ಸಂಬಂಧಿಸಿದಂತೆ ರಾಜಕುಮಾರನಿಗೆ ನೀಡಲಾದ ವಿನಾಯಿತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮೆರಿಕ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ‘ಪ್ರಧಾನಿ ಮೋದಿ ಮತ್ತು ಇತರ ಕೆಲವು ನಾಯಕರು ಹಲವಾರು ವರ್ಷಗಳಿಂದ ಇದೇ ರೀತಿಯ ರಕ್ಷಣೆಯನ್ನು ಪಡೆದಿದ್ದಾರೆ.ಅಮೆರಿಕ ಈ ರೀತಿ ಮಾಡಿರುವುದು ಇದೇ ಮೊದಲಲ್ಲ.ಇದನ್ನು ಈ ಹಿಂದೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರಿಗೆ ಅನ್ವಯಿಸಲಾಗಿದೆ’ ಎಂದು ಹೇಳಿದರು.

‘ಕೆಲವು ಉದಾಹರಣೆಗಳು: 1993 ರಲ್ಲಿ ಹೈಟಿ ಅಧ್ಯಕ್ಷ (ಜೀನ್-ಬರ್ನಾರ್ಡ್) ಅರಿಸ್ಟೈಡ್, 2001ರಲ್ಲಿ ಜಿಂಬಾಬ್ವೆ ಅಧ್ಯಕ್ಷ (ರಾಬರ್ಟ್) ಮುಗಾಬೆ, 2014ರಲ್ಲಿ ಭಾರತದಲ್ಲಿ ಪ್ರಧಾನಿ ಮೋದಿ ಮತ್ತು 2018 ರಲ್ಲಿ ಡಿಆರ್‌ಸಿ ಅಧ್ಯಕ್ಷ (ಜೋಸೆಫ್) ಕಬಿಲಾ.ಇವರಿಗೆ ವಿನಾಯಿತಿ ನೀಡಲಾಗಿದ್ದು, ಈ ನೀತಿಯನ್ನು ಅಮೆರಿಕ ನಿರಂತರವಾಗಿ ಪಾಲಿಸಿಕೊಂಡು ಬಂದಿದೆ’ ಎಂದು ಅವರು ಹೇಳಿದರು.

ಈ ಹೇಳಿಕೆಗಳ ಬಗ್ಗೆ ಭಾರತ ಇನ್ನೂ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT