ಶನಿವಾರ, ಮೇ 15, 2021
25 °C

ಕಠಿಣ ಪರಿಶ್ರಮ, ಶ್ರದ್ಧೆಯಿಂದ ಸಾಧನೆ ಮಾಡಲು ಸಾಧ್ಯ: ಅಜಿತ್‌ ಡೋಬಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಅಜ್ಮೀರ್‌ (ರಾಜಸ್ಥಾನ): ಅಜ್ಮೀರದಲ್ಲಿರುವ ಮಿಲಿಟರಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ ರಾಷ್ಟ್ರೀಯ ರಕ್ಷಣಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ಡೋಬಲ್‌ ‌ಅವರು, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಸಾಧನೆ ಮಾಡಲು ಸಾಧ್ಯ ಎಂದು ಶನಿವಾರ ಕಿವಿಮಾತು ಹೇಳಿದರು.

ಶಾಲೆಯ ಪ್ರಾಂಶುಪಾಲ ಲೆಫ್ಟಿನೆಂಟ್‌ ಕಲೋನೆಲ್‌ ಅನಂತ್‌ ಥಪಣ್‌ ಅವರು ಡೋಬಲ್‌ ಅವರನ್ನು ಸ್ವಾಗತಿಸಿದರು. ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೆಡೆಟ್ ಮೆಸ್ ಅನ್ನು ಡೋಬಲ್‌ ಉದ್ಘಾಟಿಸಿದರು.

ವಿದ್ಯಾರ್ಥಿ ಸಂಧ್ಯಾ ದೀಪ್‌ ಅವರು, ʼಆತನ (ಡೋಬಲ್‌) ಜೀವನ ʼಹಿಂದ್ʼ. ಆತನ ಹೆಸರು ʼಅಜಿತ್ʼ ಮತ್ತು ಧರ್ಮ ʼಹಿಂದೂಸ್ತಾನ್ʼʼ ಎಂದು ಪದ್ಯದ ಮೂಲಕ ಅಜಿತ್‌ ಅವರನ್ನು ಪರಿಚಯ ಮಾಡಿಕೊಟ್ಟರು. ಡೋಬಲ್‌ ಅವರ ಜೀವನದ ಕುರಿತು ಮೂಕ ನಾಟಕ ಪ್ರದರ್ಶಿಸಲಾಯಿತು.

ರಕ್ಷಣಾ ಇಲಾಖೆ ಮುಖ್ಯಸ್ಥ ಬಿಪಿನ್‌ ರಾವತ್‌ ಮತ್ತು ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧ್ಯಕ್ಷ ಜಿ. ಸತೀಶ್‌ ರೆಡ್ಡಿ ಅವರೂ ಈ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು