ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಪ್ರವಾಹ: ಕುಡಿಯುವ ನೀರು ಪಟ್ರೋಲ್‌ಗಿಂತ ದುಬಾರಿ!

Last Updated 25 ಜೂನ್ 2022, 13:57 IST
ಅಕ್ಷರ ಗಾತ್ರ

ಗುವಾಹಟಿ: ದಕ್ಷಿಣ ಅಸ್ಸಾಂನ ಪ್ರವಾಹಪೀಡಿತ ಸಿಲ್ಚಾರ್‌ ಪಟ್ಟಣದಲ್ಲಿ ಕುಡಿಯುವ ನೀರು ಪಟ್ರೋಲ್‌ಗಿಂತಲೂ ದುಬಾರಿಯಾಗಿದೆ.

‘ಪ್ರವಾಹದ ಪರಿಣಾಮವಾಗಿ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕ್ಷಾಮ ತಲೆದೋರಿದ್ದು, ₹20 ಬೆಲೆಯ ಒಂದು ಲೀಟರ್‌ ಕುಡಿಯುವ ನೀರಿನ ಬಾಟಲಿಯನ್ನು ₹100ಕ್ಕೆ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಒಂದು ಲೀಟರ್‌ ನೀರಿನ ಬಾಟಲಿಯ ದರ ₹150ಕ್ಕೇರಿದೆ’ ಎಂದು ಸಿಲ್ಚಾರ್‌ ಪಟ್ಟಣದ ಸೋನೈ ರಸ್ತೆ ಬಳಿಯ ನಿವಾಸಿ ಬಿಜು ದಾಸ್‌ ತಿಳಿಸಿದ್ದಾರೆ.

‘ನಾವು ಸಂಗ್ರಹಿಸಿಟ್ಟಿದ್ದ ಕುಡಿಯುವ ನೀರು ಖಾಲಿಯಾಗಿದೆ. ಸೋಮವಾರದಿಂದ ವಿದ್ಯುತ್‌ ಸಂಪರ್ಕ ಕೂಡ ಕಡಿತಗೊಂಡಿದೆ. ನೆರೆ ನೀರಿನಲ್ಲೇ ಒಂದು ಕಿ.ಮೀ. ದೂರ ನಡೆದು ಹೋಗಿ ಕುಡಿಯುವ ನೀರಿನ ಬಾಟಲಿ ಖರೀದಿಸಿ ತಂದಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಸಿಲ್ಚಾರ್‌ನ ವಿವಿಧ ಪ್ರದೇಶಗಳಲ್ಲಿ ಶನಿವಾರವೂ ನೀರಿನ ಮಟ್ಟ ಕಡಿಮೆಯಾಗದ ಕಾರಣ ಅಲ್ಲಿನ ಜನರ ಬಳಿಗೆ ತಲುಪಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದಿದ್ದಾರೆ.

‘ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಧಿಕಾರಿಗಳು ದೋಣಿಗಳ ಮೂಲಕ ಜನರಿಗೆ ಕುಡಿಯುವ ನೀರು ತಲುಪಿಸಬೇಕು’ ಎಂದು ಕೃತಿಮಾನ್ ರಾಯ್ ಎಂಬುವವರು ಹೇಳಿದ್ದಾರೆ.

ಪಕ್ಕದ ಮೇಘಾಲಯ ಮತ್ತು ಮಿಜೋರಾಂನ ಪರ್ವತ ಪ್ರದೇಶಗಳಲ್ಲಿ ಭಾರಿ ಮಳೆಯಾಗಿರುವುದರಿಂದ ಬರಾಕ್‌ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಕ್ಯಾಚಾರ್‌ ಜಿಲ್ಲೆಯ ಸಿಲ್ಚಾರ್‌ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT