ಶನಿವಾರ, ಜುಲೈ 2, 2022
25 °C

ಉತ್ತರಪ್ರದೇಶ: ₹ 3,000 ಕೋಟಿ ವಂಚನೆಯ ಜಾಲ ಭೇದಿಸಿದ ಸೈಬರ್‌ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೊಯ್ಡಾ, ಉತ್ತರ ಪ್ರದೇಶ: ಚೀನಾದೊಂದಿಗೆ ಸಂಪರ್ಕ ಹೊಂದಿದ, ಆನ್‌ಲೈನ್‌ ಮೂಲಕ ₹ 3,000 ಕೋಟಿ ವಂಚಿಸಿದ ಜಾಲವನ್ನು ಭೇದಿಸಿದ್ದಾಗಿ ಉತ್ತರ ಪ್ರದೇಶದ ಸೈಬರ್‌ ಪೊಲೀಸರು ಬುಧವಾರ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ, ಪಶ್ಚಿಮ ಬಂಗಾಳದ ಮಂಜರುಲ್ ಇಸ್ಲಾಂ ಎಂಬಾತನನ್ನು ನೊಯ್ಡಾದಲ್ಲಿ ಬಂಧಿಸಲಾಗಿದೆ ಎಂದು ಬರೇಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಸೈಬರ್‌ ಘಟಕ) ತ್ರಿವೇಣಿ ಸಿಂಗ್ ತಿಳಿಸಿದ್ದಾರೆ.

‘ಪ್ರಮುಖ ಸಂಸ್ಥೆಗಳಲ್ಲಿ ಅರೆ ಕಾಲಿಕ ಉದ್ಯೋಗ ಕೊಡಿಸುವುದಾಗಿ ಅಥವಾ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸುವುದಾಗಿ ಹೇಳಿ ಈ ತಂಡ, ಜನರನ್ನು ವಂಚಿಸುತ್ತಿತ್ತು. ಜನರಿಂದ ಪಡೆದ ಹಣವನ್ನು ಯುಪಿಐ ಐಡಿ ಮುಖಾಂತರ ಕ್ರಿಪ್ಟೊ ವ್ಯಾಲೆಟ್‌ಗಳಿಗೆ ವರ್ಗಾಯಿಸಲಾಗುತ್ತಿತ್ತು. ಈ ಖಾತೆಗಳನ್ನು ಚೀನಾ, ಮಲೇಷ್ಯಾ, ಫಿಲಿಪ್ಪೀನ್ಸ್ ಹಾಗೂ ವಿಯೆಟ್ನಾಮ್‌ಗಳಲ್ಲಿ ನಿರ್ವಹಿಸಲಾಗುತ್ತಿತ್ತು ’ ಎಂದು ಅವರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು