ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯತೆಗಾಗಿ ದ್ವೀಪಗಳ ಮರುನಾಮಕರಣ: ಮಮತಾ

Last Updated 23 ಜನವರಿ 2023, 17:04 IST
ಅಕ್ಷರ ಗಾತ್ರ

ಕೋಲ್ಕತ್ತ: ದ್ವೀಪಗಳಿಗೆ ಮರುನಾಮಕರಣವು ಜನಪ್ರಿಯತೆ ‍ಪಡೆದು ಕೊಳ್ಳುವ ಹುನ್ನಾರ ಮಾತ್ರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳಿಗೆ ಶಹೀದ್‌ ಮತ್ತು ಸ್ವರಾಜ್‌ ದ್ವೀಪಗಳು ಎಂದು 1943 ರಲ್ಲಿಯೇ ನೇತಾಜಿ ಅವರು ಹೆಸರು ಇರಿಸಿದ್ದರು ಎಂದು ಮಮತಾ ಹೇಳಿದ್ದಾರೆ. ಮೋದಿ ಅವರು 21 ದ್ವೀಪಗಳ ಹೆಸರು ಬದಲಾಯಿಸಿದ್ದಕ್ಕೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ನೀಲ್‌ ಮತ್ತು ಹ್ಯಾವ್‌ಲಾಕ್‌ ದ್ವೀಪಗಳ ಹೆಸರನ್ನು 2018ರಲ್ಲಿಯೇ ಶಹೀದ್‌ ದ್ವೀಪ ಮತ್ತು ಸ್ವರಾಜ್‌ ದ್ವೀಪ ಎಂದು ಬದಲಿಸಲಾಗಿದೆ.

‘ದೇಶದ ಭವಿಷ್ಯಕ್ಕಾಗಿ ನೇತಾಜಿ ಅವರು ಯೋಜನಾ ಆಯೋಗವನ್ನು ರೂಪಿಸಿದ್ದರು. ಇಂದು ನಮ್ಮ ದುರದೃಷ್ಟ. ಯಾವ ಯೋಜನೆಯೂ ಇಲ್ಲದಂತಾಗಿದೆ. ಯೋಜನಾ ಆಯೋಗವನ್ನು ರದ್ದುಪಡಿಸಲಾಗಿದೆ. ಏಕೆ ಎಂಬುದನ್ನು ಹೇಳಬಹುದೇ? ನಾನು ಅಷ್ಟೊಂದು ಬುದ್ಧಿವಂತೆ ಅಲ್ಲ. ಯಾರಿಗಾದರೂ ಈ ಬಗ್ಗೆ ಏನಾದರೂ ಅರಿವಿದ್ದರೆ ತಿಳಿಸಿಕೊಡಿ’ ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT