ಮರಿಯಂ ನವಾಜ್ ಸೇರಿ ಪ್ರಮುಖ ನಾಯಕರ ವಿರುದ್ಧ ಪ್ರಕರಣ

ಲಾಹೋರ್: ಮಿನಾರ್–ಇ–ಪಾಕಿಸ್ತಾನ್ ರ್‍ಯಾಲಿಯ ಸಂದರ್ಭದಲ್ಲಿ ರಾಷ್ಟ್ರೀಯ ಆಸ್ತಿಯೊಂದಕ್ಕೆ ಹಾನಿ ಮಾಡಿದ್ದಾರೆ ಹಾಗೂ ಕೋವಿಡ್–19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪಿಎಂಎಲ್–ಎನ್ ಪಕ್ಷದ ಉಪಾಧ್ಯಕ್ಷೆ ಮರಿಯಂ ನವಾಜ್, ಮಾಜಿ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಸೇರಿದಂತೆ ಪಾಕಿಸ್ತಾನ ಡೆಮಾಕ್ರಟಿಕ್ ಅಭಿಯಾನದ ಪ್ರಮುಖ ನಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
300ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿರ್ಬಂಧವಿದ್ದರೂ, ಭಾನುವಾರ ಲಾಹೋರ್‌ನಲ್ಲಿ ವಿಪಕ್ಷ ಮೈತ್ರಿಕೂಟವು ರ್‍ಯಾಲಿ ನಡೆಸಿತ್ತು. ಪ್ರಧಾನಿ ಇಮ್ರಾನ್ ಖಾನ್ ಪದತ್ಯಾಗ ಮಾಡಬೇಕು ಎಂದು ಆಗ್ರಹಿಸಿರುವ ವಿಪಕ್ಷಗಳು ಜ.31ರ ಗಡುವನ್ನು ನೀಡಿದ್ದು, ನಂತರದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ. ಮಿನಾರ್–ಇ–ಪಾಕಿಸ್ತಾನ್ ಪ್ರವೇಶದ್ವಾರದಲ್ಲಿರುವ ಗೇಟ್‌ನ ಚಿಲಕವನ್ನು ಮುರಿದಿರುವುದಕ್ಕೆ ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.