ಸಂಸತ್‌ನಲ್ಲಿ ರಾಷ್ಟ್ರಪತಿ ಭಾಷಣ: ಬಹಿಷ್ಕರಿಸಲು 16 ವಿರೋಧ ಪಕ್ಷಗಳ ನಿರ್ಧಾರ

ನವದೆಹಲಿ: ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡಲಿದ್ದು, ವಿರೋಧ ಪಕ್ಷಗಳು ಅಧಿವೇಶನ ಬಹಿಷ್ಕರಿಸಲು ನಿರ್ಧರಿಸಿವೆ.
ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸದನಗಳ ಜಂಟಿ ಸಭೆಯನ್ನು ಒಟ್ಟು 16 ವಿರೋಧಗಳು ಬಹಿಷ್ಕರಿಸುತ್ತಿರುವುದಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಗುರುವಾರ ಹೇಳಿದ್ದಾರೆ.
ಜನವರಿ 29ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರದ ಕುರಿತು ತನಿಖೆ ನಡೆಸುವಂತೆ 16 ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ.
Congress, NCP, J-K National Conference, DMK, AITC, Shiv Sena, Samajwadi Party, RJD, CPI (M), CPI, IUML, RSP, PDP, MDMK, Kerala Congress (M) and AIUDF will boycott the President's address in the Parliament tomorrow in protest against three farm laws, as per a joint statement
— ANI (@ANI) January 28, 2021
ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ದಿನದಂದು ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜವಾಬ್ದಾರರು ಎಂದು ಕಾಂಗ್ರೆಸ್ ಬುಧವಾರ ಆರೋಪ ಮಾಡಿದ್ದು, ಕೂಡಲೇ ಅವರನ್ನು ಸ್ಥಾನದಿಂದ ತೆಗೆದು ಹಾಕಲು ಆಗ್ರಹಿಸಿದೆ.
ಕೆಂಪು ಕೋಟೆಗೆ ಕೆಲವು ಘಾತುಕರು ನುಸುಳಲು ಅವಕಾಶ ನೀಡಿ, ಧಾರ್ಮಿಕ ಬಾವುಟವನ್ನು ಹಾರಿಸಲು ಅವಕಾಶ ಮಾಡಿಕೊಡುವ ಮೂಲಕ ರೈತರ ಪ್ರತಿಭಟನೆಯ ಬಗ್ಗೆ ಅಪಪ್ರಚಾರ ಮಾಡುವ ಹುನ್ನಾರದಲ್ಲಿ ಮೋದಿ ಸರ್ಕಾರ ಭಾಗಿಯಾಗಿರುವುದಾಗಿಯೂ ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.