ಶನಿವಾರ, ಸೆಪ್ಟೆಂಬರ್ 24, 2022
21 °C

ಸಂವಿಧಾನ ರಕ್ಷಣೆಗೆ ಯುವ ಸಮುದಾಯ ಸದಾ ಸಿದ್ಧವಿರಬೇಕು: ಮಲ್ಲಿಕಾರ್ಜುನ ಖರ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಸಂವಿಧಾನ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸಲು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಯುವ ಸಮುದಾಯ ಸದಾ ಸಿದ್ಧವಿರಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.

‘ದೇಶ ಹಾಗೂ ಸಮಾಜಕ್ಕೆ ಎದುರಾಗುವ ಬೆದರಿಕೆಗಳ ವಿರುದ್ಧ ಸದಾ ಜಾಗರೂಕರಾಗಿರಬೇಕು. ಇಲ್ಲದೇ ಹೋದರೆ ಬ್ರಿಟಿಷರ ವಿರುದ್ಧ ಹೋರಾಡಿ ಗಳಿಸಿರುವ ಸ್ವಾತಂತ್ರ್ಯ, ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಹಾಗೂ ನಾಗರಿಕ ಹಕ್ಕುಗಳು ಕಳೆದುಹೋಗಲಿವೆ’ ಎಂದು ತಿಳಿಸಿದ್ದಾರೆ.

‘ಹಲೋ’ ಬದಲು ‘ವಂದೇ ಮಾತರಂ’ 

ಮುಂಬೈ (ಪಿಟಿಐ): ‘ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಕಚೇರಿ ಅವಧಿಯಲ್ಲಿ ದೂರವಾಣಿ ಕರೆ ಸ್ವೀಕರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದೇ ಹೇಳಬೇಕು. ಮುಂದಿನ ವರ್ಷದ ಜನವರಿ 26ರವರೆಗೂ ಇದನ್ನು ಪಾಲಿಸಬೇಕು. ಈ ಸಂಬಂಧ ಆಗಸ್ಟ್‌ 18ರಂದು ಆದೇಶ ಹೊರಡಿಸಲಾಗುತ್ತದೆ’ ಎಂದು ಮಹಾರಾಷ್ಟ್ರದ ನೂತನ ಸಂಸ್ಕೃತಿ ಸಚಿವ ಸುಧೀರ್‌ ಮುಂಗಟಿವಾರ್‌ ಭಾನುವಾರ ಹೇಳಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು