ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರಿಂ ಕೋರ್ಟ್‌: ದಶಕದಿಂದ ಇತ್ಯರ್ಥಕ್ಕೆ ಕಾಯುತ್ತಿರುವ 10 ಸಾವಿರ ಪ್ರಕರಣ

Last Updated 4 ಆಗಸ್ಟ್ 2022, 14:28 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ 71 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಅವುಗಳಲ್ಲಿ 10 ಸಾವಿರ ಪ್ರಕರಣಗಳು ದಶಕದಿಂದ ಇತ್ಯರ್ಥಕ್ಕೆ ಕಾಯುತ್ತಿವೆ ಎಂದು ಗುರುವಾರ ಕಾನೂನು ಸಚಿವ ಕಿರಣ್‌ ರಿಜಿಜು ರಾಜ್ಯಸಭೆಗೆ ತಿಳಿಸಿದ್ದಾರೆ.

ಆ.2ರವರೆಗೆ 71,411 ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಈ ಪೈಕಿ 56 ಸಾವಿರ ಸಿವಿಲ್ ಮತ್ತು 15 ಸಾವಿರ ಕ್ರಿಮಿನಲ್‌ ವ್ಯಾಜ್ಯಗಳು ಎಂದು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಬಾಕಿ ಇರುವ 71,411 ಪ್ರಕರಣಗಳಲ್ಲಿ 10,491 ಪ್ರಕರಣಗಳು ಹತ್ತು ವರ್ಷಗಳಿಂದ ಬಾಕಿ ಉಳಿದಿವೆ. 42 ಸಾವಿರ ಪ್ರಕರಣಗಳು ಐದು ವರ್ಷಕ್ಕಿಂತ ಕಡಿಮೆ ಮತ್ತು 18,134 ಪ್ರಕರಣ ಐದು ಮತ್ತು ಹತ್ತು ವರ್ಷಗಳ ನಡುವಿನ ಅವಧಿಯದ್ದಾಗಿವೆ ಎಂದು ಹೇಳಿದರು.

2016ರಲ್ಲಿ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇದ್ದ 40,28,591 ಪ್ರಕರಣಗಳು ಪ್ರಸಕ್ತ ವರ್ಷದ ಜುಲೈ 29ರವರೆಗೆ 59,55,907ಕ್ಕೇರಿವೆ. 2016 ಮತ್ತು ಪ್ರಸಕ್ತ ವರ್ಷದ ಜುಲೈ 29ರ ಅವಧಿಯಲ್ಲಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲೂ ಪ್ರಕರಣಗಳ ಸಂಖ್ಯೆ ಶೇಕಡ 50ರಷ್ಟು ಏರಿಕೆ ಆಗಿದೆ. 2016ರಲ್ಲಿ 2.82 ಕೋಟಿ ಇದ್ದ ಪ್ರಕರಣಗಳ ಸಂಖ್ಯೆ, ಈ ವರ್ಷ 4.24 ಕೋಟಿ ತಲುಪಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT