ಬುಧವಾರ, ಜೂನ್ 29, 2022
27 °C

ಪಾಕಿಸ್ತಾನ: ನೂರಾರು ಪಿಟಿಐ ಕಾರ್ಯಕರ್ತರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಮರು ಚುನಾವಣೆಗೆ ಒತ್ತಾಯಿಸಿ ಪಂಜಾಬ್‌ ಪ್ರಾಂತ್ಯದಿಂದ ರಾಜಧಾನಿ ಇಸ್ಲಾಮಾಬಾದ್‌ ವರೆಗೆ ನಡೆದ  ಬೃಹತ್‌ ರ‍್ಯಾಲಿಯಲ್ಲಿ ಪಾಲ್ಗೊಂಡ ಪಾಕಿಸ್ತಾನದ ನಿಕಟ ಪೂರ್ವ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷಕ್ಕೆ ಸೇರಿದ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.

’ಆಜಾದಿ ಮಾರ್ಚ್‌‘ ಹೆಸರಿನಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಮಹಿಳಾ ಜನಪ್ರತಿಧಿ ರಶೀದ್‌ ಖಾನುಮ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಇದನ್ನು ತಡೆಯುವ ಸಲುವಾಗಿ ಆಡಳಿತರೂಢ ಪಕ್ಷ ಪಾಕಿಸ್ತಾನ್‌ ಮುಸ್ಲಿಂ ಲೀಗ್‌– ಎನ್‌(ಪಿಎಂಎಲ್‌–ಎನ್‌) ಸೂಚನೆ ಮೇರೆಗೆ ಪಿಟಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು