ಭಾನುವಾರ, ಮೇ 2, 2021
28 °C

ಹರಿಯಾಣ: ಸರ್ಕಾರಿ ಆಸ್ಪತ್ರೆಯಿಂದ 1,700 ಡೋಸ್‌ ಕೋವಿಡ್‌ ಲಸಿಕೆ ಕಳವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚಂಡಿಗಡ: ಹರಿಯಾಣದ ಜಿಂದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಿಂದ 1,700 ಡೋಸ್‌ ಕೋವಿಡ್ ಲಸಿಕೆಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕಳವು ಮಾಡಿರುವವರು ಆಸ್ಪತ್ರೆಯ ಸ್ಟೋರ್‌ ರೂಮ್‌ನಲ್ಲಿದ್ದ ಇತರ ಲಸಿಕೆ, ಔಷಧ, ಹಣವನ್ನು ಮುಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಮಿಕರೊಬ್ಬರು ಸ್ಟೋರ್‌ ರೂಮ್‌ ಮತ್ತು ರೆಫ್ರಿಜರೇಟರ್‌ ಬೀಗ ತೆಗೆದಾಗ ಈ ವಿಷಯ ಗೊತ್ತಾಯಿತು.

ಆಸ್ಪತ್ರೆಯಿಂದ  1270 ಡೋಸ್‌ಗಳಷ್ಟು ಕೋವಿಶೀಲ್ಡ್‌ ಮತ್ತು 440 ಡೋಸ್‌ಗಳಷ್ಟು ಕೋವಾಕ್ಸಿನ್‌ ಲಸಿಕೆಗಳನ್ನು ಕಳವು ಮಾಡಲಾಗಿದೆ ಎಂದು ಸಿವಿಲ್ ಲೇನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜೇಂದ್ರ ಸಿಂಗ್ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು