ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟ 413 ಕೈದಿಗಳು ದೇಶದ ಜೈಲುಗಳಲ್ಲಿದ್ದಾರೆ: ವರದಿ

Last Updated 31 ಜನವರಿ 2022, 13:09 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಅಂಕಿಅಂಶಗಳ ಪ್ರಕಾರ, ಮರಣದಂಡನೆ ಶಿಕ್ಷೆಗೆ ಗುರಿಯಾದ 413 ಕೈದಿಗಳನ್ನು 2020 ರ ಅಂತ್ಯದವರೆಗೆ ದೇಶದಾದ್ಯಂತ ಜೈಲುಗಳಲ್ಲಿ ಇರಿಸಲಾಗಿದೆ.

ಒಟ್ಟು ಮರಣದಂಡನೆಗೆ ಒಳಪಟ್ಟ ಕೈದಿಗಳಲ್ಲಿ 94 ಜನರಿಗೆ 2020 ರಲ್ಲಿ ಮರಣದಂಡನೆ ಶಿಕ್ಷೆ ಜಾರಿಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ 'ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ ಇಂಡಿಯಾ 2020' ಹೇಳಿದೆ.

ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಸಿಆರ್‌ಬಿ ಪ್ರಕಾರ, 29 ಅಪರಾಧಿಗಳ ಮರಣದಂಡನೆಯನ್ನು 2020 ರಲ್ಲಿ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. 2020 ರಲ್ಲಿ ಒಟ್ಟು 94 ಜನರಿಗೆ ಮರಣದಂಡನೆ ವಿಧಿಸಲಾಗಿದೆ.

2020ರಲ್ಲಿ ಮರಣದಂಡನೆಗೆ ಒಳಗಾದ 94 ವ್ಯಕ್ತಿಗಳಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ತಲಾ 15, ಪಶ್ಚಿಮ ಬಂಗಾಳ (14), ಬಿಹಾರ (8) ಮತ್ತು ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ ತಲಾ 6 ಮಂದಿ ಇದ್ದಾರೆ' ಎಂದು ವರದಿ ಹೇಳಿದೆ.

ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ 29 ಅಪರಾಧಿಗಳಲ್ಲಿ, ಶೇ 24.1 (ಏಳು) ಮಹಾರಾಷ್ಟ್ರ, ರಾಜಸ್ಥಾನ ಮತ್ತು ತಮಿಳುನಾಡು ಶೇ 17.2 (ತಲಾ 5) ರಷ್ಟಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾದ ಒಟ್ಟು 413 ಅಪರಾಧಿಗಳನ್ನು (ಹಿಂದಿನ ವರ್ಷಗಳ 319 ವ್ಯಕ್ತಿಗಳು ಮತ್ತು 2020 ರಲ್ಲಿ ಶಿಕ್ಷೆಗೊಳಗಾದ 94 ವ್ಯಕ್ತಿಗಳು ಸೇರಿದಂತೆ) ವಿವಿಧ ಜೈಲುಗಳಲ್ಲಿ ಇರಿಸಲಾಗಿದ್ದು, ಒಟ್ಟು ಅಪರಾಧಿಗಳ ಪೈಕಿ ಶೇ 0.36 ರಷ್ಟಿದ್ದಾರೆ' ಎಂದು ವರದಿ ಹೇಳಿದೆ.

ದೇಶದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಒಟ್ಟು ಅಪರಾಧಿಗಳಲ್ಲಿ ಶೇ 12.8 ರಷ್ಟು (413 ರಲ್ಲಿ 53) ಉತ್ತರ ಪ್ರದೇಶದಲ್ಲೇ ಹೆಚ್ಚು ಅಪರಾಧಿಗಳು ಇದ್ದಾರೆ. ನಂತರ ಮಹಾರಾಷ್ಟ್ರದಲ್ಲಿ 49 (ಶೇ 11.9) ಮತ್ತು ಮಧ್ಯಪ್ರದೇಶದಲ್ಲಿ 40 (ಶೇ 9.7) ಜನರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT