ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ ಮಕ್ಕಳ ವಿರುದ್ಧದ ಸೈಬರ್‌ ಪ್ರಕರಣಗಳು ಶೇ 400 ಹೆಚ್ಚಳ!

Last Updated 14 ನವೆಂಬರ್ 2021, 9:21 IST
ಅಕ್ಷರ ಗಾತ್ರ

ನವದೆಹಲಿ: 2019ಕ್ಕೆ ಹೋಲಿಸಿದಲ್ಲಿ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್‌ ಅಪರಾಧ ಪ್ರಕರಣಗಳು ಶೇ 400 ರಷ್ಟು ಹೆಚ್ಚಳವಾಗಿವೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆಯ ದಳದ (ಎನ್‌ಸಿಆರ್‌ಬಿ) ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಈ ಅಪರಾಧಗಳೆಲ್ಲ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲವಾಗಿ ಚಿತ್ರಿಸಿ ಪ್ರಕಟಿಸುವ ಅಥವಾ ಇನ್ನೊಂದೆಡೆ ಅವುಗಳನ್ನು ರವಾನಿಸುವುದಕ್ಕೆ ಸಂಬಂಧಿಸಿವೆ ಎಂದೂ ವರದಿ ಹೇಳಿದೆ.

ಉತ್ತರ ಪ್ರದೇಶ (170), ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಮತ್ತು ಒಡಿಶಾ (71) ರಾಜ್ಯಗಳು ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿವೆ. ವರದಿಯಾದ 842 ಸೈಬರ್‌ ಅಪರಾಧಗಳಲ್ಲಿ 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಅಪರಾಧಗಳಿಗೆ ಸಂಬಂಧಿಸಿವೆ ಎಂದು ವರದಿ ಮಾಹಿತಿ ನೀಡಿದೆ.

2019ರಲ್ಲಿ 164 ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ 117 ಮತ್ತು 2017ರಲ್ಲಿ 79 ಪ್ರಕರಣಗಳು ದಾಖಲಾಗಿದ್ದವು.

‘ಕೋವಿಡ್ ಪಿಡುಗನ್ನು ತಡೆಯಲು ಹೇರಿದ ಕ್ರಮಗಳಿಂದ ಶಾಲೆಗಳು ಮುಚ್ಚಿದವು. ಇದರಿಂದ ಮಕ್ಕಳು ಓದಿನಿಂದ ವಿಮುಖರಾಗಿ ಅಂತರ್ಜಾಲದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿತು. ಮಕ್ಕಳ ಮೇಲೆ ಸೈಬರ್‌ ಅಪರಾಧ ಹೆಚ್ಚಲು ಇದು ಕಾರಣವಿರಬಹುದು ಎಂದು ಮಕ್ಕಳ ಹಕ್ಕುಗಳು ಮತ್ತು ನೀವು ಸಂಸ್ಥೆಯಾದ ‘ಕ್ರೈ’ನ ಸಿಇಒ ಪೂಜಾ ಮಾರ್ವಾಹಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT