ಶನಿವಾರ, ಮೇ 21, 2022
26 °C

2020ರಲ್ಲಿ ವಿಶ್ವದ ನಾನಾ ದೇಶಗಳಲ್ಲಿ 51,000ಕ್ಕೂ ಹೆಚ್ಚು ಭಾರತೀಯ ಮಕ್ಕಳ ಜನನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2020ರ ಅವಧಿಯಲ್ಲಿ ವಿಶ್ವದ ಇತರೆ ದೇಶಗಳಲ್ಲಿ ಭಾರತ ಮೂಲದ 51,000ಕ್ಕೂ ಹೆಚ್ಚು ಮಕ್ಕಳ ಜನನವಾಗಿದೆ. ಈ ಪೈಕಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ(ಯುಎಇ) ಅತಿಹೆಚ್ಚು ಮಕ್ಕಳ ಜನನವಾಗಿದೆ. ಅಲ್ಲದೆ ಇದೇ ಅವಧಿಯಲ್ಲಿ ವಿವಿಧ ದೇಶಗಳಲ್ಲಿ 10,817 ಮಂದಿ ಮೃತಪಟ್ಟಿದ್ದಾರೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ದತ್ತಾಂಶದಿಂದ ತಿಳಿದುಬಂದಿದೆ.

2020ರ ಸಾಲಿನಲ್ಲಿ ವಿದೇಶಗಳಲ್ಲಿ ಸಂಭವಿಸಿದ ಭಾರತೀಯರ ಜನನ ಮತ್ತು ಮರಣ ಪ್ರಮಾಣಗಳನ್ನು 1955ರ ನಾಗರಿಕತ್ವ ಕಾಯ್ದೆಯಡಿ ಭಾರತೀಯ ಮಿಷನ್‌ಗಳಡಿ ದಾಖಲಿಸಲಾಗಿದೆ. ಈ ಪ್ರಕಾರ ವಿಶ್ವದ ನಾನಾ ದೇಶಗಳಲ್ಲಿ 51,089 ಮಕ್ಕಳ ಜನನವಾಗಿದ್ದು, ಇದರಲ್ಲಿ 16,469 ಮಕ್ಕಳು ಯುಎಇನಲ್ಲಿ ಜನಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ 6,074 ಮಕ್ಕಳ ಜನನವಾಗಿದೆ.

ಇನ್ನು ಕುವೈತ್(4202), ಕತಾರ್(3936), ಇಟಲಿ(2352), ಆಸ್ಟ್ರೇಲಿಯಾ(2316), ಒಮನ್(2177), ಬಹ್ರೇನ್(1567), ಜರ್ಮನಿ(1400), ಸಿಂಗಪುರದಲ್ಲಿ 1358 ಮಕ್ಕಳು ಜನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು