ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-‌19; ಭಾರತದಲ್ಲಿ ಈವರೆಗೆ 64 ಕೋಟಿ ಡೋಸ್‌ ಲಸಿಕೆ ವಿತರಣೆ- ಕೇಂದ್ರ

Last Updated 30 ಆಗಸ್ಟ್ 2021, 15:43 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಸೋಮವಾರದ ವೇಳೆಗೆ ನೀಡಲಾಗಿರುವ ಕೋವಿಡ್-19 ಲಸಿಕೆ ಡೋಸ್‌ಗಳ ಸಂಖ್ಯೆ 64 ಕೋಟಿ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸೋಮವಾರ ಸಂಜೆ 7 ಗಂಟೆಗೆ ಸಂಗ್ರಹಿಸಲಾದ ತಾತ್ಕಾಲಿಕ ವರದಿಯ ಪ್ರಕಾರ, ಸೋಮವಾರ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು (53,37,042) ಡೋಸ್ ಲಸಿಕೆಯನ್ನು ನೀಡಲಾಗಿದೆ.

ದಿನದ ಅಂತಿಮ ಲೆಕ್ಕಾಚಾರ ತಡರಾತ್ರಿ ವೇಳೆಗೆ ದೊರೆಯಲಿದೆ ಎಂದೂ ಸಚಿವಾಲಯ ಹೇಳಿದೆ.

ಕೋವಿಡ್-19 ನಿಂದ ದೇಶದ ಎಲ್ಲ ಜನರನ್ನು ರಕ್ಷಿಸುವ ಸಾಧನವಾಗಿ ಲಸಿಕೆ ಹಾಕುವಿಕೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT