ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 80ರಷ್ಟು ಭಾರತೀಯರು ರಜಾದಿನಗಳನ್ನು ಕುಟುಂಬದೊಂದಿಗೆ ಕಳೆಯಲು ಬಯಸುತ್ತಾರೆ: ವರದಿ

Last Updated 22 ನವೆಂಬರ್ 2022, 13:33 IST
ಅಕ್ಷರ ಗಾತ್ರ

ನವದೆಹಲಿ: ಶೇ.80 ರಷ್ಟು ಭಾರತೀಯರು ತಮ್ಮ ರಜಾದಿನಗಳಲ್ಲಿ (ಹಾಲಿಡೇ ಸೀಸನ್‌ನಲ್ಲಿ) ಕುಟುಂಬದೊಂದಿಗೆ ಇರಲು ಹಾಗೂ ಹೆಚ್ಚಿನ ಸಮಯವನ್ನು ಪ್ರವಾಸ ಮತ್ತು ಶಾಪಿಂಗ್‌ನಲ್ಲಿ ಕಳೆಯಲು ಬಯಸುತ್ತಾರೆ ಎಂದು ಸಮೀಕ್ಷೆಯ (ಸರ್ವೆ) ವರದಿಯೊಂದು ಹೇಳಿದೆ.

ಕ್ರೆಡಿಟ್‌ ಕಾರ್ಡ್‌ ಕಂಪೆನಿಅಮೆರಿಕನ್‌ ಎಕ್ಸ್‌ಪ್ರೆಸ್‌ನ 'ಅಮೆಕ್ಸ್‌ ಟ್ರೆಂಡೆಕ್ಸ್‌' ವರದಿ ಪ್ರಕಾರ,'ಸರ್ವೆಯಲ್ಲಿ ಭಾಗವಹಿಸಿದ 10ರಲ್ಲಿ 8 ಮಂದಿ ಭಾರತೀಯ ಗ್ರಾಹಕರು ತಮ್ಮ ಹಾಲಿಡೇ ಸೀಸನ್‌ನ ಹೆಚ್ಚಿನ ಸಮಯವನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವ ಸಲುವಾಗಿ, ಪ್ರವಾಸದ ಯೋಜನೆ ಮಾಡುವುದಾಗಿ ಹೇಳಿದ್ದಾರೆ' ಎನ್ನಲಾಗಿದೆ.

ಹಾಗೆಯೇ, ಹತ್ತರಲ್ಲಿ ಆರು ಮಂದಿ ಕಡಿಮೆ ಹಣ ಖರ್ಚು ಮಾಡಿ ಬಾಳಿಕೆ ಬರುವಂತಹ ಉತ್ಪನ್ನಗಳನ್ನು ಖರೀದಿಸಲು ಇಚ್ಛಿಸುವುದಾಗಿ ತಿಳಿಸಿರುವುದಾಗಿಯೂ ವರದಿ ಹೇಳಿದೆ.

ಸರ್ವೆಯಲ್ಲಿ ಪಾಲ್ಗೊಂಡ ಶೇ 88 ರಷ್ಟು ಭಾರತೀಯರು ಈ ಹಾಲಿಡೇ ಸೀಸನ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸುವ ವೇಳೆ ರಿವಾರ್ಡ್ಸ್‌ ಪಡೆಯಲು ಬಯಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದೂ ಹೇಳಲಾಗಿದೆ. ಆದರೆ, ಎಷ್ಟು ಮಂದಿ ಭಾಗವಹಿಸಿದ್ದರು ಎಂಬುದನ್ನು ಸಮೀಕ್ಷೆ ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT