ಗುರುವಾರ , ಜೂನ್ 17, 2021
27 °C

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ 89 ಲಕ್ಷಕ್ಕೂ ಹೆಚ್ಚು ಡೋಸ್‌ ಲಭ್ಯ: ಕೇಂದ್ರ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 89 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆಯ ಡೋಸ್‌ಗಳು ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 28 ಲಕ್ಷ ಡೋಸ್‌ಗಳನ್ನು ನೀಡಲಿದ್ದೇವೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.

‘ಈವರೆಗೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ 17.15 ಕೋಟಿ ಡೋಸ್‌ಗಳನ್ನು ವಿತರಣೆ ಮಾಡಿದೆ. ‍ಪೋಲಾಗಿರುವ ಲಸಿಕೆ ಸೇರಿ ಒಟ್ಟು 16,26,10,905 ಡೋಸ್‌ಗಳನ್ನು ಉಪಯೋಗಿಸಲಾಗಿದೆ’ ಎಂದು ಸಚಿವಾ‍ಲಯವು ಹೇಳಿದೆ.

‘ಕೇಂದ್ರ ಸರ್ಕಾರದ ನೇತೃತ್ವದೊಂದಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ಕೋವಿಡ್‌ ವಿರುದ್ಧ ಹೋರಾಡಲಿವೆ. ಈ ಹೋರಾಟದ ಪ್ರಮುಖ ಐದು ಕಾರ್ಯತಂತ್ರಗಳಲ್ಲಿ ಲಸಿಕೆ ಅಭಿಯಾನವು ಒಂದಾಗಿದೆ’ ಎಂದು ಸಚಿವಾಲಯವು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು