ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಐದನೇ ಹಂತದ ಮತದಾನ ಶಾಂತಿಯುತ

ಬೆಳಿಗ್ಗೆ 9ರ ವರೆಗೆ ಶೇ 16.11 ಮತದಾನ
Last Updated 17 ಏಪ್ರಿಲ್ 2021, 7:07 IST
ಅಕ್ಷರ ಗಾತ್ರ

ಕೋಲ್ಕತ್ತಾ: ಕೊರೊನಾ ಎರಡನೆ ಅಲೆಯ ನಡುವೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನ ಆರಂಭವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದಾಗಿನಿಂದ ಮತದಾರರು ಉತ್ಸಾಹದಿಂದ ಮಗಟ್ಟೆಯ ಬಳಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದಾರೆ. ಬಿಸಿಲು ಏರುತ್ತಿರುವ ನಡುವೆಯೂ ಮತಗಟ್ಟೆ ಬಳಿ ಸರತಿ ಸಾಲು ಬೆಳೆಯುತ್ತಲೇ ಇದೆ.

ಬೆಳಗಿನಿಂದ ಇಲ್ಲಿಯವರೆಗೆ ಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲೂ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 9.30ವರೆಗೆ ಶೇ 16.11ರಷ್ಟು ಮತದಾನವಾಗಿತ್ತು.

ಕೆಲವೊಂದು ಸಣ್ಣ ಪಟ್ಟ ಘಟನೆಗಳು ನಡೆದಿದ್ದು ಅವೆಲ್ಲವನ್ನೂ ಕೇಂದ್ರೀಯ ಭದ್ರತಾಪಡೆಗಳು ನಿರ್ವಹಣೆ ಮಾಡಿವೆ. ಇಂಥವುಗಳನ್ನು ಹೊರತುಪಡಿಸಿ ಎಲ್ಲ ಕಡೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಮುಖ್ಯ ಚುನಾವಣಾ ಆಯೋಗದ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.

‘ಮತದಾನ ನಡೆಯುತ್ತಿರುವ ಆರು ಜಿಲ್ಲೆಗಳಲ್ಲೂ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆದರೆ, ನಿಮಿಷಗಳಲ್ಲಿ ಕ್ಷಿಪ್ರ ಕಾರ್ಯಪಡೆ(ಕ್ಯುಆರ್‌ಟಿ)ಯವರು ಘಟನಾ ಸ್ಥಳಕ್ಕೆ ತೆರಳುತ್ತಾರೆ. ಇಲ್ಲಿವರೆಗೂ ಇಂಥ ಯಾವುದೇ ಘಟನೆಗಳು ನಡೆದಿರುವುದು ವರದಿಯಾಗಿಲ್ಲ‘ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಬಂಗಾಳದಲ್ಲಿ ಉತ್ತರ 24 ಪರಗಣ ಜಿಲ್ಲೆ, ಪುರ್ಬಾ ಬರ್ಧಮಾನ್ ಮತ್ತು ನಡಿಯಾಮತ್ತು ಉತ್ತರ ಬಂಗಾಳದಲ್ಲಿ ಜಲ್‌ಪೈಗುರಿ, ಡಾರ್ಜಿಲಿಂಗ್ ಮತ್ತು ಕಾಲಿಮ್‌ಪಾಂಗ್ ಜಿಲ್ಲೆಗಳಲ್ಲಿ 45 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 1,13,47,344 ಮತದಾರರು ಮತ ಚಲಾಯಿಸುತ್ತಿದ್ದಾರೆ. 57,35,766 ಪುರುಷರು ಮತ್ತು 56,11,354 ಮಹಿಳಾ ಮತದಾರರು, 224 ತೃತೀಯ ಲಿಂಗಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT