ಭಾನುವಾರ, ಆಗಸ್ಟ್ 14, 2022
28 °C

ಮುಸ್ಲಿಂ ಮತದಾರರು ನಿಮ್ಮ ಆಸ್ತಿ ಅಲ್ಲ: ಮಮತಾಗೆ ಒವೈಸಿ ತಿರುಗೇಟು

ಪಿಟಿಐ Updated:

ಅಕ್ಷರ ಗಾತ್ರ : | |

ಒವೈಸಿ

ಹೈದರಾಬಾದ್: ‘ಪಶ್ಚಿಮ ಬಂಗಾಳದಲ್ಲಿ ಹಿಂದೂ–ಮುಸ್ಲಿಂ ಮತಗಳನ್ನು ವಿಭಜಿಸುವ ಸಲುವಾಗಿ, ಹೈದರಾಬಾದ್‌ನ ಒಂದು ಪಕ್ಷವನ್ನು ರಾಜ್ಯಕ್ಕೆ ತರಲು ಬಿಜೆಪಿಯು ಹಣ ಖರ್ಚು ಮಾಡುತ್ತಿದೆ’ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಸ್ಲಿಂ ಮತದಾರರು ನಿಮ್ಮ (ಮಮತಾ) ಜಾಗೀರ್ (ಆಸ್ತಿ) ಅಲ್ಲ. ನೀವು ಇದುವರೆಗೆ ನಿಮಗೆ ವಿಧೇಯರಾಗಿರುವ ಮೀರ್ ಜಾಫರ್‌ಗಳು ಮತ್ತು ಸಾದಿಕ್‌ಗಳೊಂದಿಗೆ ಮಾತ್ರ ವ್ಯವಹರಿಸಿದ್ದೀರಿ. ಆದರೆ, ತಮ್ಮ ಸಮುದಾಯದ ಬಗ್ಗೆ ಯೋಚಿಸುವ ಮತ್ತು ಮಾತನಾಡುವ ಮುಸ್ಲಿಮರನ್ನು ನೀವು ಇಷ್ಟಪಡುವುದಿಲ್ಲ. ಬಿಹಾರದಲ್ಲಿರುವ ನಮ್ಮ ಮತದಾರರನ್ನು ನೀವು ಅವಮಾನಿಸಿದ್ದೀರಿ. ಆದರೆ, ನೆನಪಿಡಿ ಬಿಹಾರದಲ್ಲಿ ಪಕ್ಷಗಳ ಗತಿ ಏನಾಯಿತೆಂದು. ಮುಸ್ಲಿಂ ಮತದಾರರು ನಿಮ್ಮ ಆಸ್ತಿ ಅಲ್ಲ’ ಎಂದು ಟ್ವಿಟ್ಟರ್‌ನಲ್ಲಿ ಒವೈಸಿ ಕಿಡಿಕಾರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು