ಬುಧವಾರ, ಜೂನ್ 23, 2021
28 °C

ಆಮ್ಲಜನಕ ಕಾನ್ಸಟ್ರೇಟರ್‌ಗಳನ್ನು ಹಿಡಿದಿಟ್ಟುಕೊಂಡಿಲ್ಲ. ಕೇಂದ್ರ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವಿದೇಶಗಳು ನೆರವು ನೀಡಿರುವ ಆಮ್ಲಜನಕ ಸಾಂದ್ರೀಕರಣ ಸಾಧನಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್‌) ಕಸ್ಟಮ್ಸ್ ಇಲಾಖೆಯಲ್ಲಿ ಹಿಡಿದಿಟ್ಟುಕೊಂಡಿಲ್ಲ’ ಎಂದು ಕೇಂದ್ರ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ.

ಕೋವಿಡ್‌ ಎರಡನೇ ಅಲೆಯ ವಿರುದ್ಧ ಹೋರಾಟ ನಡೆಸಲು ಜಾಗತಿಕ ನೆರವಿನ ರೂಪದಲ್ಲಿ 3 ಸಾವಿರ ಆಮ್ಲಜನಕ ಕಾನ್ಸಟ್ರೇಟರ್‌ಗಳು ಭಾರತಕ್ಕೆ ಬಂದಿದ್ದು, ಎಲ್ಲವನ್ನೂ ವಿತರಿಸಲು ಕಳುಹಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

‘ಆಮ್ಲಜನಕ ಕಾನ್ಸಟ್ರೇಟರ್‌ಗಳು ಕಸ್ಟಮ್ಸ್ ಗೋದಾಮುಗಳಲ್ಲಿ ಬಾಕಿ ಉಳಿದಿವೆ ಎಂದು ಕೆಲವು ವರದಿಗಳು ಪ್ರಕಟವಾಗಿವೆ. ಆದರೆ, ಯಾವುದೇ ಆಧಾರವಿಲ್ಲದ ಈ ಸುದ್ದಿಗಳು ಸತ್ಯಕ್ಕೆ ದೂರವಾದವು. ಇಂತಹ ಯಾವುದೇ ಸರಕುಗಳು ಕಸ್ಟಮ್‌ ಗೋದಾಮಿನಲ್ಲಿ ಬಾಕಿ ಉಳಿದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ ಸ್ಪಷ್ಟಪಡಿಸಿದೆ’ ಎಂದು ಇಲಾಖೆ ತಿಳಿಸಿದೆ.

ಚೀನಾ 1000, ಐರ್ಲೆಂಟ್‌ 700, ಇಂಗ್ಲೆಂಡ್‌ 669, ಮಾರಿಷಸ್‌ 200, ಉಜ್ಬೆಕಿಸ್ತಾನ 151, ಥೈವಾನ್‌ 150, ರೊಮೇನಿಯಾ 80, ಥಾಯ್ಲೆಂಡ್‌ 30, ರಷ್ಯಾ 29 ಆಮ್ಲಜನಕ ಕಾನ್ಸಟ್ರೇಟರ್‌ಗಳನ್ನು ಕಳುಹಿಸಿವೆ ಎಂದು ಮಾಹಿತಿ ನೀಡಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು